Product Description
ಮರ ಗಿಡ ಹೂಗಳದು ಒಂದು ವಿಸ್ಮಯಕಾರಿ ಜಗತ್ತು. ಪರಿಸರದ ಸಮತೋಲನವನ್ನು ಕಾಪಾಡುವಲ್ಲಿ ಇವುಗಳಿಗೆ ಮಹತ್ವದ ಪಾತ್ರವಿದೆ.
ಪ್ರಕೃತಿ ತನ್ನ ಎಲ್ಲ ಕಲ್ಪನಾಶಕ್ತಿಯನ್ನು, ಕಲಾತ್ಮಕತೆಯನ್ನು ಬಳಸಿಕೊಂಡು ಈ ಸಸ್ಯಲೋಕವನ್ನು ಸೃಷ್ಟಿಸಿರುವುದರಲ್ಲಿ ಸಂಶಯವಿಲ್ಲ. ಬೇರೆ ಬೇರೆ ಜಾತಿಯ ಮರ-ಗಿಡಗಳು, ಹೂವುಗಳು, ಎಲೆಗಳಂತೂ ಒಂದಕ್ಕಿಂತ ಒಂದು ಭಿನ್ನ! ಇನ್ನು ಹೂವುಗಳಿಗೆ ಬಣ್ಣ ಹಾಕುವ ಪ್ರಕೃತಿಯ ಕೈಚಳಕ ವಿಸ್ಮಯ ಹುಟ್ಟಿಸುತ್ತದೆ. ಒಂದೊಂದು ಜಾತಿಯ ಹಣ್ಣಿಗೂ ಬೇರೆ ಬೇರೆ ರುಚಿ! ಕೆಲವು ಹಣ್ಣುಗಳು, ವಿಷಕಾರಿಯೂ ಹೌದು. ಅಂಟು ಸುರಿಸುವ ಮರಗಳು, ರಕ್ಷಣೆಗಾಗಿ ಮುಳ್ಳು ಬೆಳೆಸಿಕೊಳ್ಳುವ ಗಿಡಗಳು!
ಸಸ್ಯಪರಿಸರದ ಲೇಖನಗಳನ್ನು ಓದುತ್ತ ಹೋದಾಗ ಸಸ್ಯ ಲೋಕದ ಈ ಎಲ್ಲ ವಿಷಯಗಳು ನಮ್ಮ ಮುಂದೆ ತೆರೆದುಕೊಳ್ಳುತ್ತವೆ.