Select Size
Quantity
Product Description
ಪದ್ಮಾಕರ ಕುಲಕರ್ಣಿಯವರು ಹಳ್ಳಿಯ ಒಬ್ಬ ಪೋಸ್ಟ್ ಮಾಸ್ಟರ್ ಹೇಗಿರುತ್ತಾನೆ, ಸಂಬಳ ಕಡಿಮೆ ಇದ್ದರು ಅವರ ಬಾವ ಏಕೆ ಮತ್ತು ಹೇಗೆ ನಿಭಾಯಿಸಿದರು ಎಂದು ಚಿತ್ರಿಸುವ ಜೀವನದ ಕಥೆಗಳನ್ನು ಅವರು ಬರೆದ ರೀತಿಯಲ್ಲಿಯೆ ಓದಬೇಕು. ಓದಿದರೆ ನಮಗೆ ಒಂದು ಬಗೆಯ ತೃಪ್ತಿ, ಸಾರ್ಥಕತೆ ಅನಿಸುತ್ತದೆ. ನಾನು ಇಂತಹದನ್ನು ಓದಿ ಬಹಳ ದಿವಸಗಳೆ ಆಗಿತ್ತು. ಗೋರೂರು ರಾಮಸ್ವಾಮಿ ಅಯ್ಯಂಗಾರ್ ಅವರ ಕಥೆಗಳಲ್ಲಿ ಅಥವಾ ಮಲೆನಾಡಿನ ಚಿತ್ರಗಳಲ್ಲಿ ಕುವೆಂಪು ಅವರು ಬರೆದಿರುವಂತಹುದು. ಅಥವಾ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಬರೆದ ಕೆಲವು ಕಥೆಗಳು; ವೆಂಕಟರಾಯನ ಪಿಶಾಚಿ ಅಂತ ಒಂದು ಕಥೆ ಬರೆದಿದ್ದರು ಅವರು. ಅದರಲ್ಲಿ ಇರುವಂತಹ ಪಿಶಾಚಿಯೆ ಇವರ ದೆವ್ವದ ಕಥೆಯಲ್ಲಿ ಬರುವುದು. ಅಂತಹ ಕಥೆಗಳನ್ನು ಓದಿದಾಗ ಒಂದು ಸಾರ್ಥಕತೆ ಬರುತ್ತದಲ್ಲ, ಅದೆ ಸಾರ್ಥಕತೆ ನಮ್ಮ ಮನಸ್ಸಿನಲ್ಲಿ ಬರುತ್ತದೆ.
ಪದ್ಮಾಕರ ಕುಲಕರ್ಣಿಯವರು ಯಾವುದೆ ಪುಸ್ತಕ ಬರೆದರೂ, ಅದನ್ನು ಮೊಟ್ಟಮೊದಲು ಓದೋದಕ್ಕೆ ಇಷ್ಟ ಪಡುತ್ತೇನೆ. ಅವರು ಒಂದು ಕಾದಂಬರಿ ಬರೆಯಬೇಕು ಅಂತ ನನ್ನ ಇಷ್ಟ. ಏಕೆಂದರೆ ಈ ಪುಸ್ತಕವನ್ನು ಓದುತ್ತಾ, ನನಗೆ ಗ್ರಾಮಾಯಣದಲ್ಲಿ ಓದಿದ ಕೆಲವು ಘಟನೆಗಳ ನೆನಪಾಯಿತು. ಅಂದರೆ ನಾನು ಕಳೆದುಕೊಂಡಿರುವ ಹಳೆಯ ಬದುಕನ್ನು ಮತ್ತೆ ನನಗೆ ವಾಪಸ್ ಕೊಟ್ಟರು ಪದ್ಮಾಕರ ಅವರು. ಅವರಿಗೆ ಎಲ್ಲ ರೀತಿಯ ಯಶಸ್ಸು ಸಿಗಲಿ ಮತ್ತು ಅವರು ಒಂದು ಕಾದಂಬರಿ ಬರೆಯಲಿ ಅಂತ ಆಶಿಸುತ್ತೇನೆ. ನಮಸ್ಕಾರ.
Weight
250 GMS
Length
22 CMS
Width
14 CMS
Height
2 CMS
Author
Padmakar R Kulkarni
Publisher
Sapna Book House Pvt Ltd
Publication Year
2023
Number of Pages
228
ISBN-13
9789354569166
Binding
Soft Bound
Language
Kannada