Quantity
Product Description
ಒಂದು ಮಾವಿನ ಕಾಯಿ ಮೊದಲು ಒಗರಾಗಿರುತ್ತದೆ. ನಂತರ ಹುಳಿಯಾಗಿ, ಪಕ್ವವಾಗಿ ಬದಲಾದ ಮೇಲಷ್ಟೇ ಅದು ಹಣ್ಣಾಗಿ, ರಸ ತುಂಬಿದ ಸಿಹಿ ಮಾವಾಗಿ ಬದಲಾವಣೆ ಹೊಂದಲು ಸಾಧ್ಯ. ಹಾಗದ್ದಿರೆ ಈ ಜೀವನದಲ್ಲಿ ನಾವು, ನೀವು ಏಕೆ ಬದಲಾಗಲು ಸಾಧ್ಯವಿಲ್ಲ? ಹೌದು, ನಮ್ಮನ್ನೇ ನಾವು ಖಂಡಿತ ಪ್ರಶ್ನಿಸಿಕೊಳ್ಳಬೇಕಾದ ಪ್ರಮುಖ ಪ್ರಶ್ನೆಯಿದು. ನಾವು ಬಡಕುಟುಂಬದಲ್ಲಿ ಹುಟ್ಟುವುದು, ನಮ್ಮಲ್ಲಿ ದೋಷವಿರುವುದು, ಬದುಕಿನಲ್ಲಿ ನಿರಂತರ ಕಷ್ಟ ಸಮಸ್ಯೆಗಳನ್ನು ಎದುರಿಸುವುದು, ಇದೆಲ್ಲವೂ ನಮ್ಮ ಬದಲಾವಣೆಗಾಗಿ ನಮ್ಮ ನಿಜವಾದ ಶಕ್ತಿಯನ್ನು ಹೊರತರಲು ಬಂದಿದೆ ಎಂದು ತಿಳಿಯಬೇಕು. ಖಂಡಿತವಾಗಿ, ನಮ್ಮನ್ನು ನಾವು ಮಾರ್ಪಡಿಸಿಕೊಂಡರಷ್ಟೇ ಇಲ್ಲಿ ಎಲ್ಲವೂ ಸಾಧ್ಯ. ಬದಲಾವಣೆ ಎಲ್ಲರಿಗೂ ಅನಿವಾರ್ಯವೇ. ಆದರೆ ನಮಗೆ ನಮ್ಮ ಶಕ್ತಿ, ಅರ್ಹತೆ ಚೆನ್ನಾಗಿ ತಿಳಿದಿರಬೇಕು ಮತ್ತು ನಮಗೆ ಯಾವ ರೀತಿಯ ಬದಲಾವಣೆ ಬೇಕೆಂದು ಗುರುತಿಸಿಕೊಂಡಿರಬೇಕು. ನಂತರ ಆ ಬದಲಾವಣೆಯನ್ನು ನಮ್ಮ ಧ್ಯೇಯ, ಗುರಿಗೆ ಸರಿಯಾಗಿ ಗೊತ್ತುಪಡಿಸಿಕೊಂಡರೆ ನಮ್ಮ ಉದ್ದೇಶವನ್ನು ತಲುಪುವುದು ಸುಲಭ. ಈ ಬದುಕಿನಲ್ಲಿ ಸೋಲುಗಳು ನಮ್ಮನ್ನು ಹಿಮ್ಮೆಟ್ಟಿಸಿದಾಗ ಓಡಿಹೋಗಿ ಬಚ್ಚಿಟ್ಟುಕೊಳ್ಳಲು ಸಾವಿರ ದಾರಿಗಳಿವೆ. ಆದರೆ ಈ ಬದುಕನ್ನು ಸರಿದಾರಿಗೆ ತರಲು ಇರುವ ದಾರಿ ಒಂದೇ, ಅದುವೇ ಆತ್ಮವಿಶ್ವಾಸದಿಂದ ನಮ್ಮ ಬದಲಾವಣೆಗಾಗಿ ಬದಲಾಗುವುದು. ಇಲ್ಲಿ ನಮ್ಮ ಶಕ್ತಿ ನಮಗಷ್ಟೇ ಗೊತ್ತು. ಮನಸ್ಸದ್ದಿರೆ ಮಾರ್ಗ, ನಮ್ಮ ಬದಲಾವಣೆ ನಮ್ಮ ಕೈಲಿದೆ ಅಲ್ಲವೇ...?
Author
Vageesh Katti
Binding
Soft Bound
ISBN-13
9788168923300
Number of Pages
148
Publication Year
2026
Publisher
Sawanna Enterprises
Height
2 CMS
Length
22 CMS
Weight
200 GMS
Width
14 CMS
Language
Kannada