Product Description
ಸಮಾಜದಿಂದ ಬಹಿಷ್ಕೃತರಾದ ಕುಷ್ಠರೋಗಿಗಳ ಮತ್ತು ಇನ್ನಿತರ ದೀನದಲಿತರ ಉದ್ಧಾರಕ್ಕಾಗಿ ತಮ್ಮ ಇಡೀ ಬದುಕನ್ನು ಮೀಸಲಿಟ್ಟವರು ಬಹಳ ವಿರಳ. ಇಂಥ ವಿರಳರಲ್ಲಿ ವಿರಳ ವ್ಯಕ್ತಿ ಬಾಬಾ ಆಮಟೆಯವರು. ಕುಷ್ಠರೋಗಿಗಳ ಸೇವೆಯೆಂಬುದು ವೇದಿಕೆಗಳ ಮೇಲಿನಿಂದ ನೀಡುವ ಉಪದೇಶದಿಂದ ಆಗುವಂಥದಲ್ಲ. ಗಾಯಗಳಿಗೆ ಮುಲಾಮು ಹಚ್ಚುವುದರಿಂದ ಹಿಡಿದು, ಅವರ ಪುನರ್ವಸನ, ಅವನ ಮನಸ್ಸಿನಲ್ಲಿರುವ ಕೀಳರಿಮೆಯನ್ನು, ಅವರ ಬಗ್ಗೆ ಇತರರ ಮನಸ್ಸಿನಲ್ಲಿರುವ ಅಸಹ್ಯ ಭಾವನೆಯನ್ನು ತೊಡೆದುಹಾಕುವುದು, ಕುಷ್ಠರೋಗ ನಿವಾರಣೆಯಲ್ಲಿ ಸಹಕರಿಸಲು ಸಮರ್ಥ ಕಾರ್ಯಕರ್ತರ ತರಬೇತಿ - ಹೀಗೆ ಅಗಾಧವಾದ ಕಾರ್ಯವ್ಯಾಪ್ತಿ. ಈ ಕಾರ್ಯದಲ್ಲಿ ಬಾಬಾ ಆಮಟೆಯವರು ಸಂಪೂರ್ಣವಾಗಿ ತೊಡಗಿಕೊಂಡದ್ದಲ್ಲದೆ, ತಮ್ಮ ಪತ್ನಿ ಸೌ|| ಸಾಧನಾ ತಾಯಿಯವರನ್ನು, ಮಕ್ಕಳು, ಸೊಸೆಯಂದಿರನ್ನು ತೊಡಗಿಕೊಳ್ಳುವಂತೆ ಮಾಡಿದ್ದು ಅವರ ಹೆಗ್ಗಳಿಕೆ. ಅವರ ಬದುಕು ಸಾಧನೆಗಳ ಕುರಿತ ಈ ಕೃತಿ, ಅವರು ಕೈಗೊಂಡ ಹಲವಾರು ಕಾರ್ಯಗಳ ಸಫಲತೆಯನ್ನು, ಅವರೊಳಗಣ ಮನುಷ್ಯನನ್ನು ಗುರುತಿಸುವ ಪ್ರಯತ್ನವಾಗಿದೆ ಅಷ್ಟೆ.