Select Size
Quantity
Product Description
ಗಿಣಿ ಬಾಗಿಲು’ ಹರೀಶ್ ಕೇರ ಅವರ ಬದುಕು ಅರಳಿಸುವ ಲಹರಿಗಳ ಕಥಾಸಂಕಲನವಾಗಿದೆ. ಮೂವತ್ತೊಂಬತ್ತು ಲಹರಿಗಳಿರುವ ಈ ಪುಸ್ತಕದಲ್ಲಿ, ಟೈಟಾನಿಕ್ ಹಡಗಿನ ಬಗ್ಗೆ ʻಒಂದು ಹಡಗು ಮುಳುಗುವ ಮುನ್ನʼ ಲಹರಿಯ ಕೊನೆಯಲ್ಲಿ, ಟೈಟಾನಿಕ್ ಹಡಗಿನ ಬಗ್ಗೆ ಬಿಬಿಸಿಗೆ ಎರಡು ಘಂಟೆಗಳ ಡಾಕ್ಯುಮೆಂಟರಿ ಮಾಡಿದ ಜೇಮ್ಸ್ ಕ್ಯಾಮರೂನ್ ಹೇಳುತ್ತಾನೆ: ʻಟೈಟಾನಿಕ್ ಮನುಕುಲದ ಪಾಲಿಗೆ ಒಡೆದ ಹಾಳಿಗುಳ್ಳೆ. ಇಪ್ಪತ್ತನೇ ಶತಮಾನದ ಆರಂಭದಲ್ಲಿ ಎಂಥ ಸಾಧನೆಯ ಅಬ್ಬರವಿತ್ತು! ಲಿಫ್ಟ್ ಗಳು! ವಾಹನಗಳು! ವಿಮಾನಗಳು! ನಿಸ್ತಂತು ರೇಡಿಯೋ! ಎಲ್ಲವೂ ಪರಮಾಧ್ಭುತವಾಗಿ, ಮನುಷ್ಯನ ಸಾಧನೆಯ ಕೊನೆಯಿಲ್ಲದ ಮೆಟ್ಟಿಲುಗಳಾಗಿ ಕಾಣಿಸುತ್ತಿದ್ದವು. ಟೈಟಾನಿಕ್ ನೊಂದಿಗೆ ಅಂತಿಮವಾಗಿ ಎಲ್ಲವೂ ಮುಳುಗಿದವು…ʼ ಈ ವಿಷಯಗಳನ್ನು ಎಂಬತ್ತನೇ ದಶಕದಲ್ಲಿ ಆಲ್ವಿನ್ ಟಫ್ಲರ್, ತನ್ನ ಫ್ಯೂಚರ್ ಶಾಕ್, ದಿ ಥರ್ಡ್ ವೇವ್, ವಾರ್ ಆಂಡ್ ಆಂಟಿ ವಾರ್ ಪುಸ್ತಕಗಳಲ್ಲಿ ಚರ್ಚಿಸಿದರೆ, ತೀರ ಇತ್ತೀಚೆಗೆ ಥಾಮಸ್ ಫ್ರೈಡ್ ಮನ್ ʻದಿ ವರ್ಲ್ಡ್ ಇಸ್ ಫ್ಲ್ಯಾಟ್ʼ ಪುಸ್ತಕದಲ್ಲಿ ಚರ್ಚಿಸಿದ್ದಾನೆ. ಈ ಇಬ್ಬರು ಲೇಖಕರ ಮಧ್ಯೆ, ಬಹಳಷ್ಟು ಜನ ಲೇಖಕರು ತಮ್ಮದೇ ಆದ ವಿಧಾನಗಳಲ್ಲಿ ಆಧುನಿಕ ನಾಗರೀಕತೆಯ ಹೊಸ ಆವಿಷ್ಕಾರಗಳ ನಶ್ವರತೆಯನ್ನು ವಿಮರ್ಶಿಸಿದ್ದಾರೆ. ಈ ನಶ್ವರತೆಯು ಅರಿವಾಗುತ್ತಿದ್ದಂತೆ ಮನುಷ್ಯನಿಗೆ ಮತ್ತೆ ವಾಸ್ತವದ ಅರಿವಾಗುತ್ತದೆ ಮತ್ತು ಆತ ಅಂತರ್ಮುಖಿಯಾಗಿ ಆತ್ಮ ವಿಮರ್ಶೆ ಮಾಡಲಾರಂಭಿಸುತ್ತಾನೆ. ಈ ಆತ್ಮ ವಿಮರ್ಶೆಗಳ ಹಲವು ಮುಖಗಳನ್ನು ಲೇಖಕ ಸರಳವಾಗಿ ತಮ್ಮ ಪುಸ್ತಕದಲ್ಲಿ ಚರ್ಚಿಸಿದ್ದಾರೆ
Weight
200 GMS
Length
22 CMS
Width
14 CMS
Height
2 CMS
Author
Harish Kera
Publisher
Sapna Book House Pvt Ltd
Publication Year
2022
Number of Pages
129
ISBN-13
9789354562990
Binding
Soft Bound
Language
Kannada