Select Size
Quantity
Product Description
ಬಸವಣ್ಣನನ್ನು ಕುರಿತು ೧೨. ೧೩ನೇ ಶತಮಾನದಿಂದ ಹಿಡಿದು ಇಂದಿನವರೆಗೆ ಅನೇಕರು ಕಾವ್ಯ, ಪುರಾಣ, ವಿಮರ್ಶೆ, ಸಂಶೋಧನಾತ್ಮಕ ಕೃತಿಗಳನ್ನು ರಚಿಸಿರುತ್ತಾರೆ. ಪ್ರಾಚೀನರಲ್ಲಿ ಹರಿಹರನಿಂದ ಪ್ರಾರಂಭವಾಗಿ ಆಧುನಿಕರಲ್ಲಿ ಸಾಂಘಿಕ ಹಾಗೂ ವಯಕ್ತಿಕ ನೆಲೆಗಳಲ್ಲಿ ಅನೇಕರು ಕೃತಿ ರಚನೆ ಮಾಡಿ ರುತ್ತಾರೆ. ಸಾಂಘಿಕ ನೆಲೆಯಲ್ಲಿ ಬಸವಣ್ಣನನ್ನು ಕುರಿತು ಕರ್ನಾಟಕದ ವಿವಿಧ ಮಠಮಾನ್ಯಗಳು, ಸಂಘ ಸಂಸ್ಥೆಗಳು ವಿಶ್ವವಿದ್ಯಾಲಯಗಳು ಕೆಲಸ ಮಾಡಿದರೆ, ವ್ಯಕ್ತಿ ನೆಲೆಯಲ್ಲಿ ಹರ್ಡೇಕರ ಮಂಜಪ್ಪ, ಫ.ಗು. ಹಳಕಟ್ಟಿ, ಶಿ.ಶಿ. ಬಸವನಾಳ, ನಂದಿಮಠ, ಎಚ್. ದೇವಿರಪ್ಪ, ಎಂ.ಆರ್. ಶ್ರೀ. ಆರ್.ಸಿ. ಹಿರೇಮಠ, ಜಿ.ಎಸ್. ಸಿದ್ದಲಿಂಗಯ್ಯ, ಎಂ. ಚಿದಾನಂದ ಮೂರ್ತಿ, ಪಿ.ಬಿ. ದೇಸಾಯಿ, ಎಂ.ಎಂ. ಕಲಬುರಗಿ, ತಿಪ್ಪೇರುದ್ರಸ್ವಾಮಿ, ಎಲ್. ಬಸವರಾಜ, ಕೆ.ಜಿ. ನಾಗರಾಜಪ್ಪ, ಬಸವರಾಜ ಕಲ್ಲುಡಿ, ಲಿಂಗಣ್ಣ ಸತ್ಯಂಪೇಟ, ಬೆಲ್ದಾಳ ಶರಣರು ಭಾಲ್ಕಿ ಬಸವಲಿಂಗ ಪಟ್ಟದೇವರು ವಿಜಯ ಕುಮಾರ ಮಹಾನುಭಾವಿಗಳು, ಎಂ.ಎಸ್. ಆಶಾದೇವಿ, ಬಸವರಾಜ ಸಬರದ, ವೀರಣ್ಣ ದಂಡೆ, ಜಯಶ್ರೀ ದಂಡೆ, ಎಚ್.ಟಿ. ಪೋತೆ, ಸೋಮನಾಥ ಯಾಳವಾರ, ಗವಿಸಿದ್ದಪ್ಪ ಎಚ್. ಪಾಟಿಲ, ಬಸವರಾಜ ಬಲ್ಲೂರೆ, ಶಿವರಾಜ ಪಾಟೀಲ ಮುಂತಾದ ಅನೇಕರು ಬಸವಣ್ಣನನ್ನು ಅನೇಕ ನೆಲೆಗಳಲ್ಲಿ ಅಧ್ಯಯನ ಕೈಕೊಂಡು ಲೇಖನ-ಕೃತಿಗಳನ್ನು ರಚಿಸಿರುತ್ತಾರೆ. ಆ ನೆಲೆಯಲ್ಲಿ ನನ್ನ ಬಸವ ಭಾರತವೂ ಒಂದು ಚಿಕ್ಕ ಪ್ರಯತ್ನವಾಗಿದೆ.
Weight
150 GMS
Height
1 CMS
Width
14 CMS
Length
22 CMS
Publisher
Sapna Book House Pvt Ltd
Publication Year
2023
ISBN-13
9789354565199
Binding
Soft Bound
Author
Dr Shrishail Nagaral
Number of Pages
139
Language
Kannada