Quantity
Product Description
ನಿರ್ಜನವಾದ ಬೀದಿ. ಸರಿಜೆಗತ್ತಲು, ಒಬ್ಬ ವ್ಯಕ್ತಿ ಹಿಂದೆ ಹಿಂದೆ ತಿರುಗಿ ನೋಡುತ್ತಾ ಅನುಮಾನಾಸ್ಪದವಾಗಿ ಬೇಗ ಬೇಗ ಹೆಜ್ಜೆ ಹಾಕುತ್ತಿದ್ದಾನೆ. ಅವನಿಗೆ ಗೊತ್ತಾಗದಂತೆ ಒಬ್ಬ ಹಿಂಬಾಲಿಸುತ್ತಿದ್ದಾನೆ. ಅವನ ಕೈಯಲ್ಲಿ ಪಿಸ್ತೂಲಿದೆ. ದೂರದಲ್ಲೆಲ್ಲೋ ನಾಯಿ ಬೊಗಳುತ್ತಿದೆ. ಸಣ್ಣದಾಗಿ ಮಳೆ ಬೀಳುತ್ತಿದೆ. ಮುಂದೆ ಹೋಗುತ್ತಿದ್ದ ವ್ಯಕ್ತಿ ಓಡಲು ಆರಂಭಿಸುತ್ತಾನೆ. ಹಿಂಬಾಲಿಸುತ್ತಿದ್ದವ ಕೂಡಲೇ ಗುರಿಯಿಟ್ಟು ಪಿಸ್ತೂಲಿನಿಂದ ಇನ್ನೇನು ಗುಂಡು ಹಾರಿಸಬೇಕು... ...ಇಲ್ಲ ಇಲ್ಲ. ಬೇಲೂರು ರಾಮಮೂರ್ತಿಯವರ ಪುಸ್ತಕದಲ್ಲಿ ಹೀಗೆಲ್ಲಾ ಆಗುವುದಿಲ್ಲ. ಕೊಲೆಯಾಗುತ್ತದೆ ನಿಜ. ಅದೂ ಹಾಡು ಹಗಲಲ್ಲೇ ಆ ಕೊಲೆಗಾರನನ್ನು ಪತ್ತೆಹಚ್ಚಲು ಪೋಲಿಸರು ತಮ್ಮೆಲ್ಲಾ ಬುದ್ದಿ ಖರ್ಚು ಮಾಡುತ್ತಾರೆ. ಕಂಡ ಕಂಡವರ ಮೇಲೆಲ್ಲಾ ಅನುಮಾನ ಪಡುತ್ತಾರೆ. ಪ್ರತಿ ಅಧ್ಯಾಯವೂ ಆಕಸ್ಮಿಕ ತಿರುವುಗಳನ್ನು ಹೊಂದಿದೆ. ಓದುಗರು ಮುಂದಿನ ದೃಶ್ಯ ಊಹಿಸುವುದರಲ್ಲಿ ಮತ್ತೇನೋ ನಡೆದಿರುತ್ತದೆ. ಕ್ಷಣ ಕ್ಷಣಕ್ಕೂ ಕುತೂಹಲ ಕೆರಳಿಸುವ ಈ ಮಾಯಾಜಾಲದ ಪತ್ತೇದಾರಿ ಕಾದಂಬರಿಯನ್ನು ನೀವು ಓದಿಯೇ ಸವಿಯಬೇಕು.
Author
Beluru Ramamurthy
Binding
Soft Bound
Number of Pages
200
Publication Year
2025
Publisher
Ankitha Pusthaka
Height
2 CMS
Length
22 CMS
Weight
200 GMS
Width
14 CMS
Language
Kannada