Quantity
Product Description
Ramaniya Rajastana | Srinivasa Murthy N S
ಶ್ರೀ ಶ್ರೀನಿವಾಸಮೂರ್ತಿ ಎನ್. ಎಸ್. ರವರು ಪ್ರಸಿದ್ದ ಗಣಿತ ಲೇಖಕರಾಗಿದ್ದ ಶ್ರೀ ಸೀತಾರಾಮ ರಾವ್ ಎನ್.ಎಸ್. ಅವರ ಪುತ್ರರಾಗಿದ್ದು ಕರ್ನಾಟಕ ರಾಜ್ಯದ ಚಿಕ್ಕಮಗಳೂರು ಜಿಲ್ಲೆಯ ಹರಿಹರಪುರದಲ್ಲಿ ತಮ್ಮ ಆರಂಭಿಕ ವಿದ್ಯಾಭ್ಯಾಸ ಮುಗಿಸಿ ನಂತರ ಕುವೆಂಪು ವಿಶ್ವವಿದ್ಯಾನಿಲಯದಲ್ಲಿ ಎಂ.ಎಸ್ಸಿ ಸ್ನಾತಕೋತ್ತರ ಪದವಿ ಪಡೆದರು.
ಕಳೆದ ಎರಡು ದಶಕಗಳಿಗಿಂತಲೂ ಅಧಿಕ ಕಾಲದಿಂದ ಪುರಾತನ ದೇವಾಲಯಗಳ ಅಧ್ಯಯನ ಮಾಡುತ್ತಿದ್ದು, ಅಪರೂಪದ ದೇವಾಲಯಗಳನ್ನು ಪರಿಚಯಿಸುವ ದೃಷ್ಟಿಯಿಂದ ಪತ್ರಿಕೆಗಳಿಗೆ ಅಂಕಣಗಳನ್ನು ಬರೆಯಲಾರಂಭಿಸಿದರು. ಇವರು ಈ ನಿಮಿತ್ತ ರಾಜ್ಯದ ಸುಮಾರು 1800ಕ್ಕೂ ಅಧಿಕ ಪುರಾತನ ದೇವಾಲಯಗಳಿಗೆ ಭೇಟಿ ನೀಡಿದ್ದು, ಇದನ್ನು ಕೇವಲ ಸಂಶೋಧನೆಗೆ ಸೀಮಿತಗೊಳಿಸದೆ ಜನಸಾಮಾನ್ಯರಿಗೆ ತಲುಪಿಸುವ ಪ್ರಯತ್ನ ಮಾಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಆಜ್ಞಾತ ದೇವಾಲಯಗಳ ಬಗ್ಗೆ ಸುಮಾರು 800ಕ್ಕೂ ಅಧಿಕ ಲೇಖನಗಳನ್ನು ಬರೆದಿದ್ದು, ನಾಡಿನ ವಿವಿಧ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿದೆ. ಇಲ್ಲಿಯವರೆಗೆ ಹತ್ತು ಪುಸ್ತಕಗಳು ಪ್ರಕಟವಾಗಿವೆ. ಮೊದಲ ಪುಸ್ತಕಕ್ಕೆ ಪ್ರತಿಷ್ಠಿತ 'ಕಳಿಂಗ ಭಾಷಾ ಸಮಾನ್' ಪ್ರಶಸ್ತಿ ಬಂದಿದೆ. ಛಾಯಾಚಿತ್ರದಲ್ಲಿ ಆಸಕ್ತಿ ಹೊಂದಿರುವ ಇವರು ದೇವಾಲಯಗಳ ಚಿತ್ರಗಳಲ್ಲದೆ ಪರಿಸರ ಮತ್ತು ಇತರ ವಿಷಯಗಳ ಚಿತ್ರಗಳನ್ನೂ ತೆಗೆದಿದ್ದಾರೆ.
ಪ್ರವಾಸದ ಭಾಗವಾಗಿ ಇವರು ಸಾಗರ, ಪ್ರಕೃತಿಯ ಸುಂದರ ಚಿತ್ರಣಗಳು, ಕೋಟೆಗಳು, ಆರಮನೆಗಳು ಸೇರಿದಂತೆ ವಿವಿಧ ಅಪರೂಪದ ತಾಣಗಳು ಮತ್ತು ಅಲ್ಲಿನ ಸಂಸ್ಕೃತಿ ತಾಣಗಳಿಗೆ ಭೇಟಿ ನೀಡಿದ್ದಾರೆ. ರಾಜಸ್ಥಾನ ಪ್ರವಾಸದಲ್ಲಿ ಅಲ್ಲಿನ ಅಪರೂಪದ ತಾಣಗಳ ಕುರಿತ ವಿವರ ಪ್ರವಾಸಿಗರಿಗೆ ತಲುಪಲಿ ಎಂಬ ಆಶಯದಲ್ಲಿ ಈ ಪುಸ್ತಕ, ಇಲ್ಲಿ ಪ್ರವಾಸಿಗರು ನೋಡಿದ ಸ್ಥಳಗಳ ಜೊತೆಯಲ್ಲಿ ಅಪರಿಚಿತ ತಾಣಗಳ ವಿವರ ನೀಡಿದ್ದಾರೆ.
Author
N S Srinivasa Murthy
Binding
Soft Bound
Number of Pages
157
Publication Year
2025
Publisher
Sahana Publications
Height
2 CMS
Length
22 CMS
Weight
200 GMS
Width
14 CMS
Language
Kannada