Select Size
Quantity
Product Description
ನಿತ್ಯ ಬದುಕಿಗೆ ಸರಳ ಅಧ್ಯಾತ್ಮದ ಸವಿ....
ಮಹಾದೇವ ಬಸರಕೋಡ ಅವರು ನಾಡಿನಾದ್ಯಂತ ತಮ್ಮ ಅಂಕಣ ಬರೆಹಗಳ ಮೂಲಕ ಜನಪ್ರಿಯರಾದವರು. ಅದರಲ್ಲೂ ಮುಖ್ಯವಾಗಿ ಸತ್ಚಿಂತನೆ, ಸದ್ಭಾವನೆಯ ವಿಚಾರಗಳುಳ್ಳ ಅವರ ಲೇಖನಗಳು ಸದ್ಧರ್ಮದ ನಡೆಯಲ್ಲಿ ಸಾಗುವವರಿಗೆ ದಾರಿದೀಪವಾಗಿವೆ. ಈ ನಿಟ್ಟಿನಲ್ಲಿ ಅವರ ಕೃತಿಗಳು ಕೂಡ ಅಷ್ಟೇ ಪ್ರಾಮುಖ್ಯತೆಯನ್ನು ಗಳಿಸಿವೆ. ಕಳೆದ ವರ್ಷ ನಮ್ಮ ಪ್ರಕಾಶನ ಸಂಸ್ಥೆಯಿಂದ ಅವರ ಸ್ಫೂರ್ತಿದಾಯಕ ಲೇಖನಗಳ ಸಂಕಲನ `ಆರದಿರಲಿ ಬೆಳಕು' ಕೃತಿಯನ್ನು ಹೊರತಂದಿದ್ದೆವು. ಸಮಾಜಕ್ಕೆ ಅತ್ಯವಶ್ಯಕವಾದ, ಉತ್ತಮವಾದ ಚಿಂತನೆಗಳನ್ನೊಳಗೊಂಡ ಕೃತಿಗಳನ್ನು ನೀಡಬೇಕಾದುದು ನಮ್ಮ ಮೂಲ ಆಶಯಗಳಲ್ಲಿ ಒಂದಾಗಿದ್ದುದರಿಂದ ಲೇಖಕರ `ಆರದಿರಲಿ ಬೆಳಕು' ಕೃತಿ ನಮ್ಮ ಉದ್ದೇಶಕ್ಕೆ ಪೂರಕವಾಗಿತ್ತು. ಅದರಂತೆ ಈ ಕೃತಿ ಓದುಗರಿಂದ ಉತ್ತಮ ಪ್ರಶಂಸೆಯನ್ನು ಕೂಡ ಪಡೆದಿತ್ತು.
ನಮ್ಮ ಮುಂದುವರೆದ ಪ್ರಯತ್ನವೆಂಬಂತೆ ಮಹಾದೇವ ಬಸರಕೋಡ ಅವರು `ವಿಶ್ವವಾಣಿ' ದಿನಪತ್ರಿಕೆಯಲ್ಲಿ ಕಗ್ಗದ ಕುರಿತಾಗಿ ನಿರಂತರವಾಗಿ ಅಂಕಣ ರೂಪದಲ್ಲಿ ಬರೆದಿದ್ದ ಲೇಖನಗಳನ್ನು ಸೇರಿಸಿ ಕೃತಿಯನ್ನು ಈ ವರ್ಷ ಪ್ರಕಟಿಸುವ ಪ್ರಯತ್ನವನ್ನು ಮಾಡಿದ್ದೇವೆ. `ಇರುವ ಭಾಗ್ಯವ ನೆನೆದು' ಡಿವಿಜಿ ಅವರ ಅದ್ಭುತ ಚಿಂತನೆಗಳಲ್ಲಿನ ಒಂದು ಸಾಲು. ಪ್ರತಿಯೊಬ್ಬರಿಗೂ ಪ್ರೇರಣೆ ನೀಡುವಂತಹ ಸಾಲಿದು. ಇದನ್ನೇ ಕೃತಿಯ ಶೀರ್ಷಿಕೆಯನ್ನಾಗಿ ಬಳಸಿಕೊಂಡು, `ಮಂಕುತಿಮ್ಮನ ಕಗ್ಗ' ಕೃತಿ ಸಾರವನ್ನು ಸಾಮಾನ್ಯರಿಗೂ ಅತ್ಯಂತ ಸರಳವಾಗಿ ತಿಳಿಸುವ ಪ್ರಯತ್ನವಿದು. ಲೇಖಕರಾದ ಮಹಾದೇವ ಬಸರಕೋಡ ಅವರು ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವುದರಿಂದ, ಮಕ್ಕಳಿಗೆ ಪಾಠವನ್ನು, ತಿಳಿವನ್ನು ನಾಜೂಕಾಗಿ ಹೇಳುವಂತೆ ಇಲ್ಲಿಯೂ ಕೂಡ ಡಿವಿಜಿ ಅವರ ಜೀವನ ದರ್ಶನದ ಪಾಠವನ್ನು ಅತ್ಯಂತ ಸರಳವಾಗಿ ಕೃತಿಯಲ್ಲಿ ತಿಳಿಸಿದ್ದಾರೆ. ಈಗಾಗಲೇ ಕಗ್ಗ ದರ್ಶನದ ಲೇಖನಗಳನ್ನು ವಿಶ್ವವಾಣಿ ಪತ್ರಿಕೆಯಲ್ಲಿ ಓದಿದವರಿಗೂ, ಓದದವರಿಗೂ ಈ ಕೃತಿಯು ಸಮಷ್ಟಿಯಾದ ಸದ್ಭಾವನೆಯನ್ನು ಮೂಡಿಸುತ್ತದೆ. ಮಕ್ಕಳಿಗೂ ಕೂಡ ಅತ್ಯಂತ ಸ್ಫೂರ್ತಿದಾಯಕವಾಗಲಿದೆ.
-ಶ್ರೀಧರ ಬನವಾಸಿ
Weight
300 GMS
Length
22 CMS
Author
Mahadeva Basarakoda
Publisher
Panchami Media Publications
Publication Year
2023
ISBN-10
9788196705657
Number of Pages
124
Binding
Soft Bound
Language
Kannada