Quantity
Product Description
ರೋಗ ಬರುವ ತನಕ ನಮಗೆ ನಮ್ಮ ಆರೋಗ್ಯದ ಬಗ್ಗೆ ಚಿಂತೆ ಇರುವುದಿಲ್ಲ. ತಿನ್ನಬಾರದ್ದನ್ನೆಲ್ಲಾ ತಿನ್ನುತ್ತೇವೆ. ಮಾಡಬಾರದ್ದನ್ನೆಲ್ಲಾ ಮಾಡುತ್ತೇವೆ. ಪ್ರಕೃತಿಯ ಕೊಡುಗೆಯಾದ ನಮ್ಮ ದೇಹವನ್ನು, ಮನಸ್ಸನ್ನು ದಂಡಿಸಿ, ಬಳಲಿಸುತ್ತೇವೆ; ಅವುಗಳ ಪೋಷಣೆಯನ್ನು ಮಾಡುವುದಿಲ್ಲ. ಅವುಗಳು ಹಾನಿಗೊಳಗಾಗುತ್ತಿದ್ದರೂ ನೋಡಿಕೊಂಡು ಸುಮ್ಮನೆ ಇರುತ್ತೇವೆ. ಯಾವುದೇ ಒಂದು ಅಂಗ ಸರಿಯಾಗಿ ಕೆಲಸ ಮಾಡದೇ ಕೆಟ್ಟಾಗ, ರೋಗ ಲಕ್ಷಣಗಳು ಕಾಣಿಸಿಕೊಂಡಾಗ, ಹೌಹಾರುತ್ತೇವೆ. ರೋಗಕ್ಕಿಂತ ರೋಗ ಭಯವೇ ನಮ್ಮನ್ನು ತಿಂದು ಹಾಕುತ್ತದೆ. ರೋಗ ಲಕ್ಷಣವನ್ನು ಕಂಡು, ನಮ್ಮ ಮನಃಪಟಲದ ಮೇಲೆ ಕ್ಯಾನ್ಸರ್, ಕ್ಷಯ, ಹೃದಯಾಘಾತ, ಅಂಗವಿಕಲತೆ, ಸಾವು ಇತ್ಯಾದಿಗಳ ಮೆರವಣಿಗೆ ಪ್ರಾರಂಭವಾಗುತ್ತದೆ. ಆದ್ದರಿಂದಲೇ ನಮ್ಮಲ್ಲಿ ಪ್ರತಿಯೊಬ್ಬರಿಗೂ ಸಾಮಾನ್ಯ ರೋಗ ಲಕ್ಷಣಗಳ ಬಗ್ಗೆ ತಿಳುವಳಿಕೆ ಇರಬೇಕು. ಅವುಗಳು ಬರಲು ಕಾರಣ, ಅವು ಯಾವ ರೋಗದ ಲಕ್ಷಣ, ಅವು ಬಂದಾಗ ಏನು ಮಾಡಬೇಕು, ಅವುಗಳ ಪ್ರಾರಂಭ ಯಾವುದು, ಯಾವಾಗ ಹೆಚ್ಚಾಗುತ್ತವೆ, ಯಾವಾಗ ಕಡಿಮೆಯಾಗುತ್ತವೆ ಎಂಬ ಮಾಹಿತಿಯನ್ನು ವೈದ್ಯರಿಗೆ ನೀಡುವ ಅಗತ್ಯದ ಅರಿವು ನಮಗಿರಬೇಕು. ಈ ದಿಸೆಯಲ್ಲಿ ಉಪಯುಕ್ತವಾಗುವಂತೆ ಈ ಪುಸ್ತಕವನ್ನು ರಚಿಸಲಾಗಿದೆ. ಸಾಮಾನ್ಯ ಜ್ವರದಿಂದ ಹಿಡಿದು ಲಕ್ವದವರೆಗೆ ರೋಗಲಕ್ಷಣಗಳನ್ನು ವಿವರಿಸಲಾಗಿದೆ
Binding
Soft Bound
Author
Dr C R Chandrashekar
Number of Pages
104
Publication Year
2025
Publisher
Nava Karnataka Publications Pvt Ltd
Height
1 CMS
Length
22 CMS
Width
14 CMS
Weight
100 GMS
Language
Kannada