Quantity
Product Description
ನಾಡೋಜ ಎಚ್.ಎಲ್. ನಾಗೇಗೌಡರು, ತಮ್ಮ ತೊಂಬತ್ತು ವರ್ಷಗಳ ಸುದೀರ್ಘ ಜೀವಿತಾವಧಿಯಲ್ಲಿ ಒಂದು ಕ್ಷಣವನ್ನೂ ಅಪವ್ಯಯ ಮಾಡದೆ ಬದುಕನ್ನು ಸಾರ್ಥಕಗೊಳಿಸಿಕೊಂಡ ಸ್ಮರಣೀಯ ಚೇತನ. ಕರ್ನಾಟಕ ಜಾನಪದ ಪರಿಷತ್ತು ಮತ್ತು ಜಾನಪದ ಲೋಕ ಅವರ ಸಾರ್ಥಕ್ಯದ ಪ್ರತೀಕವಾಗಿ ನಮ್ಮ ಕಣ್ಣ ಮುಂದಿವೆ. ಪ್ರವಾಸಿ ಕಂಡ ಇಂಡಿಯಾ ಸಂಪುಟಗಳು, ಕಾವ್ಯ, ಕಾದಂಬರಿಗಳು, 'ನನ್ನೂರು' ಮತ್ತು 'ಬೆಟ್ಟದಿಂದ ಬಟ್ಟಲಿಗೆ' ಎಂಬ ವಿಶಿಷ್ಟ ಕೃತಿಗಳು, 'ವೆರಿಯರ್ ಎಲ್ವಿನರ-ಗಿರಿಜನ ಪ್ರಪಂಚ' ಮತ್ತು 'ಕೆನಿಲ್ವರ್ತ್'ರಂಥ ಅನುವಾದಗಳು, 'ದೊಡ್ಡಮನೆ'ಯಂತಹ ಮಹಾಕಾದಂಬರಿ ಅವರ ಸೃಜನಶೀಲ ಪ್ರತಿಭೆಗೆ ಸಾಕ್ಷಿಯಾಗಿ ನಮ್ಮನ್ನು ಮಂತ್ರಮುಗ್ಧರನ್ನಾಗಿಸುತ್ತವೆ. 'ಸೋಬಾನೆ ಚಿಕ್ಕಮ್ಮನ ಪದಗಳು', 'ಪದವವೇ ನಮ್ಮ ಎದೆಯಲ್ಲಿ', 'ಹೆಳವರು ಮತ್ತು ಅವರ ಕಾವ್ಯಗಳು', 'ಕರ್ನಾಟಕ ಜಾನಪದ ಕಥೆಗಳು', 'ಮಾರಮ್ಮ : ಒಂದು ಅಧ್ಯಯನ' ಮುಂತಾದ ಹತ್ತಾರು ಜನಪದ ಸಂಶೋಧನೆ ಮತ್ತು ಸಂಪಾದನಾ ಕೃತಿಗಳು ಅವರ ಗ್ರಾಮೀಣ ಜ್ಞಾನದ ಪ್ರತೀಕವಾಗಿವೆ. ನಾಗೇಗೌಡರ ಶ್ರಮ ಮತ್ತು ಪ್ರತಿಭೆಗೆ ಸಂದ ಗೌರವಗಳು ಹಲವಾರು, ಕರ್ನಾಟಕ ಸಾಹಿತ್ಯ ಅಕಾಡೆಮಿ, ಜಾನಪದ ಅಕಾಡೆಮಿ ಹಾಗೂ ನಾಟಕ ಅಕಾಡೆಮಿ ಗೌರವ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಪ್ರತಿಷ್ಠಿತ ಪಂಪ ಪ್ರಶಸ್ತಿ, ಕನ್ನಡ ವಿಶ್ವವಿದ್ಯಾಲಯದ 'ನಾಡೋಜ' ಗೌರವ ಪದವಿ, ಅಖಿಲ ಕರ್ನಾಟಕ ಜಾನಪದ ಸಮ್ಮೇಳನದ ಸರ್ವಾಧ್ಯಕ್ಷ, ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ, ಸರ್ಕಾರ ಸ್ಥಾಪಿಸಿದ ಕರ್ನಾಟಕ ಜಾನಪದ 3. ಮತ್ತು ಯಕ್ಷಗಾನ ಅಕಾಡೆಮಿಯ ಪ್ರಥಮ ಅಧ್ಯಕ್ಷರು - ಇವೆಲ್ಲಾ ಅವರ ಸಾಧನೆಗೆ ಸಂದ ಗೌರವಗಳು. ಈ ಎಲ್ಲವನ್ನೂ ಮೀರಿದ ಸಂಗತಿ ಎಂದರೆ ಕರ್ನಾಟಕದಾದ್ಯಂತ ಇರುವ ಜನಪದ ಕಲಾವಿದರನ್ನು ಅವರು ಪ್ರೀತಿಸಿದ ಬಗೆ ಅಪೂರ್ವವಾದದ್ದು, ಅನನ್ಯವಾದದ್ದು. ನಾಡೋಜ ಎಚ್.ಎಲ್. ನಾಗೇಗೌಡರ ಮಹತ್ವದ ಕೃತಿಗಳನ್ನು ಪುನರ್ ಮುದ್ರಣ ಮಾಡುವ ಯೋಜನೆಯ ಅಂಗವಾಗಿ ಪ್ರಸ್ತುತ 'ಬೆಟ್ಟದಿಂದ ಬಟ್ಟಲಿಗೆ' ಎಂಬ ವಿಶಿಷ್ಟ ಕೃತಿ ಇದೀಗ ಹೊರಬರುತ್ತಿದೆ.
Author
H L Nagegowda
Binding
Soft Bound
Number of Pages
254
Publication Year
2025
Publisher
Karnataka Janapada Parishad
Height
3 CMS
Length
22 CMS
Weight
300 GMS
Width
14 CMS
Language
Kannada