Quantity
Product Description
ವ್ಯಕ್ತಿತ್ವ ವಿಕಸನದ ಪುಟ್ಟ ಹಣತೆ ಎಂಬ ಉಪಶೀರ್ಷಿಕೆಯಡಿ ಲೇಖಕ ಡಿ.ವಿ. ಗುರುಪ್ರಸಾದ್ ಅವರು ಬರೆದ ಪ್ರೇರಣಾತ್ಮಕ ಲೇಖನಗಳ ಭಾಗ-2ರ ಕೃತಿ. ಸ್ವತಃ ಲೇಖಕರು ‘ಜೀವನದಲ್ಲಿ ಯಾವುದಾದರೊಂದು ಸನ್ನಿವೇಶದಲ್ಲಿ ವಿಫಲತೆ ಅನುಭವಿಸಿದಾಗ ಅದನ್ನು ಹೇಗೆ ಎದುರಿಸಬೇಕು ಎಂಬುದರ ಸಿದ್ಧತೆ ಮಾಡಿಕೊಂಡಿರುವುದಿಲ್ಲ. ಈ ಕೊರತೆಯೇ ಅವರನ್ನು ತೊಂದರೆಗೀಡು ಮಾಡುತ್ತದೆ. ಇಂತಹ ಸಿದ್ಧತೆ ಕೈಗೊಳ್ಳಬೇಕು ಎಂದು ಹೇಳುವುದೇ ಈ ಕೃತಿಯ ಉದ್ದೇಶ. ಜೀವನದಲ್ಲಿ ನಡೆಯುವ ಪ್ರತಿಯೊಂದು ಪರೀಕ್ಷೆಯಲ್ಲಿಯೂ ನೂರಕ್ಕೆ ನೂರರಷ್ಟು ಯಶಸ್ಸು ಗಳಿಸುವುದು ಸಾಧ್ಯವಿಲ್ಲ. ಆದರೆ, ಕೆಲವು ಪಾಲಕರು ತಮ್ಮ ಮಕ್ಕಳು ಗಣಿತದಲ್ಲಿ ನೂರಕ್ಕೆ ನೂರು ಅಂಕ ಪಡೆಯಬೇಕು ಎಂದು ಆಶಿಸುತ್ತಾರೆ. ಇದು ಮಕ್ಕಳಲ್ಲಿ ಕೀಳರಿಮೆ ಬೆಳೆಸುತ್ತದೆ. ವೈಫಲ್ಯ ಎನ್ನುವುದು ಒಂದು ಸ್ವಾಭಾವಿಕ ಪ್ರಕ್ರಿಯೆ. ಅದನ್ನು ಹೇಗೆ ಎದುರಿಸಬೇಕು. ಮನಸ್ಸನ್ನು ಹೇಗೆ ಗಟ್ಟಿ ಮಾಡಿಕೊಳ್ಳಬೇಕು. ಸೋಲನ್ನು ಹೇಗೆ ಗೆಲುವನ್ನಾಗಿ ಪರಿವರ್ತಿಸಿಕೊಳ್ಳಬೇಕು’ ಈ ಕುರಿತು ಕೃತಿಯಲ್ಲಿ ಚರ್ಚಿಸಲಾಗಿದೆ ಎಂದು ಹೇಳಿದ್ದಾರೆ.
Author
Dr D V Guruprasad
Binding
Soft Bound
Number of Pages
104
Publication Year
2021
Publisher
Saahitya Prakashana (Hubbali)
Height
1 CMS
Length
22 CMS
Weight
100 GMS
Width
14 CMS
Language
Kannada