Select Size
Quantity
Product Description
ಕನ್ನಡದಲ್ಲೂ ಅಹಿಲ್ಯಾಬಾಯಿ ಹೋಳ್ತರ್ ಕುರಿತು ಈಗಾಗಲೇ ನಾಲ್ಕಾರು ಕೃತಿಗಳು ಬಂದಿರುವ ನೆನಪು. ಈ ಸಾಲಿನಲ್ಲಿ ಮಿತ್ರರಾದ ದ್ವಾರನಕುಂಟೆ ಪಾತಣ್ಣನವರೇ ಎರಡು ಕೃತಿಗಳನ್ನು ರಚಿಸಿದ್ದಾರೆ. ಒಂದು ನಾಟಕ ರೂಪದಲ್ಲಿ ಪ್ರಕಟವಾಗಿರುವ 'ದಿಗ್ವಿಜಯ'. ಈಗ ಕಾದಂಬರಿಯಾಗಿ ಪ್ರಕಟವಾಗುತ್ತಿರುವ 'ರಾಣಿ ಅಹಿಲ್ಯಾಬಾಯಿ ಹೋಲ್ಡರ್'. ಈ ಕೃತಿ ರಚನೆಗಳಿಗೆ ಪೂರ್ವ ಸಿದ್ಧತೆಯ ರೂಪದಲ್ಲಿ ಹಲವು ಆಕರ ಗ್ರಂಥಗಳನ್ನು ಅಧ್ಯಯನಕ್ಕೆ ಬಳಸಿರುವುದು ಶ್ಲಾಘನೀಯ ವಿಚಾರ. ಸಾಮಾನ್ಯ ಹೆಣ್ಣು ಮಗಳ ಅಸಮಾನ್ಯ ಸಾಧನೆಯ ಪ್ರತೀಕವಾಗಿ ಅಹಿಲ್ಯಾಬಾಯಿಯ ಚರಿತ್ರೆ ಇಂಡಿಯಾದ ಐತಿಹಾಸಿಕ ಪುಟಗಳಲ್ಲಿ ದಾಖಲಾಗಿರುವುದು ಚಾರಿತ್ರಿಕ ಸತ್ಯ. ಅಹಿಲ್ಯಾಬಾಯಿಯ ಗಂಡನ ದೋಷ ದೌರ್ಬಲ್ಯಗಳು ಅದಕ್ಕೆ ವಿರುದ್ಧವಾಗಿ ಆತ್ಮಗೌರವದ ನಡೆಯಲ್ಲಿ ಅಹಿಲ್ಯಾಬಾಯಿಯ ವಿಚಕ್ಷಣ ಮುತ್ಸದ್ಧಿ ಗುಣದ ಸ್ವಾಭಿಮಾನಿ ನಡೆಯನ್ನು ಇಡೀ ಕಾದಂಬರಿ ಚರಿತ್ರೆಗೆ ಪೂರಕವಾಗುವಂತೆ ನಿರೂಪಿಸಿದೆ. ಇಂಡಿಯಾದ ಮಹಿಳಾಮಣಿಗಳಲ್ಲಿ ವೀರ ವನಿತೆಯರ ಸಾಲಿನಲ್ಲಿ ಅಹಿಲ್ಯಾಬಾಯಿಯ ಚರಿತ್ರೆ ಅಜರಾಮರ. ಅಹಿಲ್ಯಾಬಾಯಿಯ ಬಗ್ಗೆ ಕೇವಲ ಅಭಿಮಾನದ ಡವಾಳದಲ್ಲಿ ಕಥನವನ್ನು ಕಟ್ಟಿಕೊಡದೆ, ಳ್ಳರ್ ಮನೆತನಕ್ಕೆ ಸಂಬಂಧಿಸಿದಂತೆ ಸಿಗುವ ಲ್ಲಾ ವಿವರಗಳನ್ನು ಕಲೆ ಹಾಕಿ ಸಂಶೋಧನಾ ದ್ಯಾರ್ಥಿಯಂತೆ ಸತ್ಯವನ್ನು ಹೆಕ್ಕಿ ತೆಗೆದು ಈ ಕಾದಂಬರಿಯನ್ನು ಪಾತಣ್ಣನವರು ರಚಿಸಿದ್ದಾರೆ.
ಅವರಿಗೆ ಆತ್ಮೀಯ ಅಭಿನಂದನೆಗಳು.
Binding
Soft Bound
Author
Dwarakanakunte Pathanna
Number of Pages
288
Publisher
Sneha Prakashana
Publication Year
2024
Height
2 CMS
Length
22 CMS
Weight
400 GMS
Language
Kannada