Product Description
ಸಂಬಂಧಗಳು ಮನಸ್ಸಿನ ಸಮಾಧಾನದಿಂದಲೇ ಎಲ್ಲ ಹಂತಗಳಲ್ಲೂ ಸರಿಯಾಗಿ ನಿರ್ವಹಿಸಲ್ಪಡುತ್ತವೆ ಎನ್ನಬಹುದು. ಹಾಗಾಗಿ ಸಂಬಂಧ ನಿರ್ವಹಣೆಯಲ್ಲಿ ಒತ್ತಡವಿಲ್ಲದ ಮಾನಸಿಕ ನಿರಾಳತೆ ಅಗತ್ಯವಿದೆ. ಸಂಬಂಧಗಳ ನಿರ್ವಹಣೆ ಸರಿಯಾಗಿ ಆಗದಿದ್ದಲ್ಲಿ ಕುಟುಂಬದ ಹಾಗೂ ಸಮಾಜದ ಸ್ವಾಸ್ಥ್ಯ ಕೆಡುವುದು. ನಾವು ನಮ್ಮ ಮನಸ್ಸನ್ನು ಸಮಸ್ಥಿತಿಯಲ್ಲಿ ಇಟ್ಟುಕೊಂಡರೂ ಪರಿಸ್ಥಿತಿಗಳು ಮನಸ್ಸನ್ನು ಬಿಗಡಾಯಿಸುತ್ತವೆ ನಿಜ. ಭಾವನೆಗಳೂ ಆಲೋಚನೆಗಳೂ ಪರಿಸ್ಥಿತಿಗೆದುರಾಗಿ ಸೆಣಸಾಡುವುದರಲ್ಲಿ ಕೆಲ ಸಲ ಸೋಲತೊಡಗಬಹುದು. ಅಂಥ ಸಂದರ್ಭಗಳಲ್ಲೂ ನಾವು ನಾವೇ ಆಗಿ ಮನೋಸ್ಥೈರ್ಯದಿಂದ ಎದುರಿಸುವುದರಲ್ಲಿಯೇ ಇದೆ ಬದುಕು. ‘ಗೆದ್ದಾಗ ಚಪ್ಪಾಳೆ ಹೊಡೆಯುವ ಹತ್ತು ಬೆರಳುಗಳಿಗಿಂತ ಸೋತಾಗ ಕಣ್ಣೊರೆಸುವ ಒಂದು ಬೆರಳೇ ವಾಸಿ’ ಎಂಬ ಸೂಕ್ತಿಯಂತೆ ಏನೇ ಎದುರಾದರೂ ಧೈರ್ಯ, ಆತ್ಮವಿಶ್ವಾಸ, ಸಮಾಧಾನದಿಂದ ಬಾಳಬೇಕಾಗುವುದು. ಎಲ್ಲ ಸಂಬಂಧ ನಿರ್ವಹಣೆಯಲ್ಲೂ ಪ್ರೀತಿ ತುಂಬಿದ ಜವಾಬ್ದಾರಿ, ಕಾಳಜಿ ಮುಖ್ಯ. ಕೆಲ ಸಂದರ್ಭಗಳಲ್ಲಿ ತುಸು ನೋವು, ಸಹಿಸುವಿಕೆ, ತ್ಯಾಗವೂ ಬೇಕು. ಎಲ್ಲವೂ ಒಳಿತಾಗುವುದೆಂಬ ಭರವಸೆಯೇ ಬಾಳಿನ ಜ್ಯೋತಿ, ಆಶಾದೀಪ.