Product Description
೧೯೬೫ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯಿಂದ ಪುರಸ್ಕೃತರಾಗಿರುವ ಎಸ್.ವಿ. ರಂಗಣ್ಣನವರು, ಮೈಸೂರು ವಿಶ್ವವಿದ್ಯಾನಿಲಯದ ಖ್ಯಾತಿವೆತ್ತ ಆಂಗ್ಲ ಪ್ರಾಧ್ಯಾಪಕರ ಪರಂಪರೆಗೆ ಸೇರಿದವರು. ಆಂಗ್ಲ ಸಾಹಿತ್ಯದ ತಲಸ್ಪರ್ಶಿ ಅಧ್ಯಯನ ಮಾಡಿದ್ದಂತೆಯೇ ಸಂಸ್ಕೃತ ಮತ್ತು ಕನ್ನಡ ಭಾಷಾ ಸಾಹಿತ್ಯವಗಳನ್ನು ಆಳವಾಗಿ ಅಧ್ಯಯನ ಮಾಡಿದ್ದ ಅವರು ಕನ್ನಡ ವಿಮರ್ಶಾ ಸಾಹಿತ್ಯವನ್ನು ಅರ್ಥಪೂರ್ಣವಾದ ರೀತಿಯಲ್ಲಿ ಬೆಳೆಸಿದ ಹಿರಿಮೆಗೆ ಪಾತ್ರರಾಗಿದ್ದಾರೆ. ಅವರಲ್ಲಿ ಅಡಗಿದ್ದ ಸೃಜನಶೀಲತೆಯ ಪ್ರತೀಕವಾಗಿರುವ ರಂಗಬಿನ್ನಪ ಆಧುನಿಕ ಯುಗದಲ್ಲಿ ವಚನ ಸಾಹಿತ್ಯಕ್ಕೆ ಹೊಸ ಆಯಾಮವನ್ನು ನೀಡಿರುವ ಕೃತಿ. ಯಾವುದೇ ಭಾಷೆಗೂ ಭೂಷಣಪ್ರಾಯರಾಗಿದ್ದ ಅವರು ಕನ್ನಡದ ಹೊಂದೇರನ್ನು ಹೊಸ ಮಾರ್ಗದಲ್ಲಿ ಕೊಂಡೊಯ್ದ ಬಹುಮುಖ ಪ್ರತಿಭೆಯ ವಿದ್ವಾಂಸರು.