Product Description
ಕ್ಯಾಲೆಂಡರನ್ನು ಮನೆ, ಶಾಲೆ, ಅಂಗಡಿ, ಕಛೇರಿಗಳಲ್ಲಿ ಗೋಡೆಗೆ ನೇತುಹಾಕಲಾಗಿರುತ್ತದೆ ಮತ್ತು ಅದರಲ್ಲಿನ 7 ಅಡ್ಡಸಾಲು ಅಥವಾ ಕಂಬಸಾಲುಗಳಲ್ಲಿ ಜೋಡಿಸಲಾಗಿರುವ ಸಂಖ್ಯೆಗಳ ಬಗ್ಗೆ ತಿಳಿಯದವರು ವಿರಳ. ಆದರೆ ಈ ಜೋಡಣೆಯಲ್ಲಿರುವ ಕುತೂಹಲಕಾರೀ ವಿನ್ಯಾಸಗಳನ್ನು ಅರಿತವರು ಬಹಳ ಅಪರೂಪ. ಕ್ಯಾಲೆಂಡರಿನ ಸಂಖ್ಯೆಗಳ ಜೋಡಣೆಯಲ್ಲಿರುವ ಅದ್ಭುತವಾದ ಕೆಲವು ವಿನ್ಯಾಸಗಳನ್ನು ಮಕ್ಕಳಿಗೆ ವಿಶದಪಡಿಸುವುದರೊಂದಿಗೆ, ಗಣಿತದ ಮೋಜಿಗೆ ನೂತನ ಆಕರವನ್ನು ದೊರಕಿಸುವ ಪ್ರಯತ್ನವನ್ನು ಈ ಪುಸ್ತಕವು ಮಾಡುತ್ತದೆ. ಹಂತಹಂತವಾಗಿ ವಿಷಯದ ಬೆಳವಣಿಗೆ ಮಾಡಿ ಅತಿ ಸಹಜ ರೀತಿಯಲ್ಲಿ, ಕ್ಲಿಷ್ಟ ಗಣಿತ ವಿಷಯಗಳನ್ನು ರವಾನಿಸುತ್ತದೆ. ಪದವಿ ಹಂತದಲ್ಲಿ ಅಭ್ಯಾಸ ಮಾಡುವ ಗ್ರೂಪ್ಸ್, ರಿಂಗ್ಸ್ ಮತ್ತು ಫೀಲ್ಡ್ಸ್ಗಳ ಬಗ್ಗೆ ಮೂಲಭೂತ ಪರಿಕಲ್ಪನೆಗಳನ್ನು ಪರಿಚಯಿಸುತ್ತದೆ. ಒಂದು ಕ್ಯಾಲೆಂಡರಿನ ಹಾಳೆಯ ಮೂವತ್ತು ಅಂಕಿಗಳಲ್ಲಿ ಇಷ್ಟೊಂದು ಗಣಿತ! ಓದಿದವರಿಗಷ್ಟೇ ದಕ್ಕುವ ಸಂತೋಷ, ಆಮೋದಗಳು ಇಲ್ಲಿವೆ.