Quantity
Product Description
ಎಲ್ಲರೂ ಮಾಡುವುದು ಹೊಟ್ಟೆಗಾಗಿ, ಗೇಣು ಬಟ್ಟೆಗಾಗಿ' ಎನ್ನುವ ದಾಸರ ನುಡಿ ಇವತ್ತಿಗೆ ಒಂದಷ್ಟು ಬದಲಾವಣೆಯಾಗಿದೆ. ಹೊಟ್ಟೆ ಮತ್ತು ಬಟ್ಟೆಯನ್ನು ಮೀರಿದ ಅವಶ್ಯಕತೆಗಳು ಇಂದು ಉತ್ಪನ್ನವಾಗಿವೆ. ಸಮಾಜ ಬೆಳೆಯುತ್ತ ಹೋದಂತೆ ಇದು ಸಹಜ. ಅಂದಿನ ಕಾಲಘಟ್ಟದಲ್ಲಿ ಹೊಟ್ಟೆಗೆ ಮತ್ತು ಬಟ್ಟೆಗೆ ಆದರೆ ಸಾಕು ಬೇರೇನೂ ಬೇಕಿಲ್ಲ ಎನ್ನುವಂತಹ ಸನ್ನಿವೇಶವಿತ್ತು. ಬದಲಾದ ಸನ್ನಿವೇಶದಲ್ಲಿ ನಾವು ಅವುಗಳನ್ನು ಮೀರಿದ್ದೇವೆ. ಇವತ್ತಿಗೆ ಕಾರು, ಫೋನು ಇತ್ಯಾದಿಗಳು ಅವಶ್ಯಕವಾಗಿವೆ. ಅವು ಐಷಾರಾಮ ಎನ್ನಿಸಿಕೊಳ್ಳುವುದಿಲ್ಲ. ಕಳೆದ ಎರಡು ದಶಕಗಳಿಂದ ಭಾರತ ಆರ್ಥಿಕವಾಗಿ ಅಭಿವೃದ್ಧಿ ಹೊಂದುತ್ತಾ ಬಂದಿದೆ. ಹಿಂದೆ ಜನರ ಕೈಯಲ್ಲಿ ಹಣವಿರುತ್ತಿರಲಿಲ್ಲ. ಇಂದು ಅವಶ್ಯಕತೆಯನ್ನು ಮೀರಿ ಒಂದಷ್ಟು ಹಣ ಕೂಡ ಉಳಿಯುತ್ತಿದೆ. ಆದರೆ ಹಣದುಬ್ಬರ ಎನ್ನುವುದು ಅದರ ಮೌಲ್ಯವನ್ನು ಕಸಿದು ಬಿಡುತ್ತದೆ. ಈ ನಿಟ್ಟಿನಲ್ಲಿ ನೋಡಿದಾಗ ಪ್ರತಿಯೊಬ್ಬರೂ ಫೈನಾನ್ಶಿಯಲ್ ಪ್ಲಾನಿಂಗ್ ಮಾಡಬೇಕಾಗಿದೆ. ಈ ಪುಸ್ತಕ ಆ ದಾರಿಯಲ್ಲಿ ನಡೆಯ ಬಯಸುವವರಿಗೆ ಒಂದು ನಕ್ಷೆಯಂತೆ ದಾರಿ ತೋರುತ್ತದೆ. `ಆರಂಭ', `ಸರಿಯಾದ ದಾರಿ' ನಮ್ಮನ್ನು `ಗಮ್ಯ'ಕ್ಕೆ ಕರೆದುಕೊಂಡು ಹೋಗುತ್ತದೆ ಎನ್ನುವ ಮೂರು ಅಂಶಗಳನ್ನು ಆಧಾರವಾಗಿಟ್ಟುಕೊಂಡು ಪುಸ್ತಕ ತೆರೆದುಕೊಳ್ಳುತ್ತಾ ಹೋಗುತ್ತದೆ. ಶುಭವಾಗಲಿ.
Binding
Soft Bound
Author
Kanchana Hegde
ISBN-13
9788199052642
Number of Pages
140
Publisher
Sawanna Enterprises
Publication Year
2025
Height
2 CMS
Length
22 CMS
Weight
200 GMS
Width
14 CMS
Language
Kannada