Product Description
ಪ್ರಿಯ ಕಿರಿಯ ಮಿತ್ರರೇ,
ಜಾಣ-ಜಾಣೆಯರಾದ ನಿಮ್ಮ ಓದಿನ ಅಭಿರುಚಿ ಹೆಚ್ಚಿಸುವ, ನಿಮಗೆ ಮನರಂಜನೆ ನೀಡುವ, ನಿಮ್ಮ ಕುತೂಹಲ ಕೆರಳಿಸುವ, ಅದೇ ವೇಳೆ ನೀತಿ ಸಂದೇಶ ಸಾರುವ ಮಿನಿ ಕಾದಂಬರಿ ಇಲ್ಲಿದೆ. ಮಂಜ, ಗೋಪಿ, ನಾಗ ಮತ್ತು ರಂಗ ಗೆಳೆಯರು. ಇವರು ಕಾಡನ್ನು ಪ್ರೀತಿಸುವವರು. ಶಾಲೆಗೆ ಬಿಡುವಿದ್ದಾಗ ಕಾಡಿನಲ್ಲಿ ಅಲೆದಾಡುವುದು ಇವರ ಪ್ರಿಯವಾದ ಹವ್ಯಾಸ. ಒಮ್ಮೊಮ್ಮೆ ಗೋಪಿಯ ಅಜ್ಜನೂ ಇವರಿಗೆ ಜೊತೆಯಾಗುತ್ತಿದ್ದ. ಒಮ್ಮೆ ಒಂದು ಕಾಡಾನೆಯ ಹಿಂಡು ಅವರ ಕಣ್ಣಿಗೆ ಬಿತ್ತು. ಮುಂದೆ ಪ್ರತಿದಿನ ಆನೆಗಳನ್ನು ಅರಸುತ್ತ ಅವರು ಕಾಡಿಗೆ ಹೋಗುತ್ತಿದ್ದರು. ಆ ಆನೆಗಳಿಗೆ ಒಂದೊಂದು ಹೆಸರನ್ನೂ ಕೊಟ್ಟರು. ಖ್ಯಾತ ಲೇಖಕರಾದ ಶ್ರೀ ನಾ. ಡಿಸೋಜ ಈ ಸಾಹಸಿ ಬಾಲಕರ ಕಥೆಯನ್ನು ರಚಿಸಿದ್ದಾರೆ.