Product Description
ಆಧುನಿಕ ಜಗತ್ತಿನಲ್ಲಿ ಅತ್ಯಂತ ಮಹತ್ವದ ಚಿಂತಕ ಎಂದು ಹೆಸರುವಾಸಿಯಾದ ಗ್ರಾಂಶಿಯು ನಮಗೆ ಅನೇಕ ಚಿಂತನೆಗಳು ಮತ್ತು ವಿಚಾರಧಾರೆಯನ್ನು ರೂಪಿಸಿ ಕೊಟ್ಟಿದ್ದಾನೆ, ನಾವು ಗ್ರಾಂಶಿಯನ್ನು ನೋಡುವುದು ಅಂದರೆ ಮತ್ತೆ ಸಂಸ್ಕೃತಿಯ ಚಿಂತನೆಗಳನ್ನು ಮರುಯೋಚನೆ ಮಾಡುವುದೂ ಹೌದು. ಅದರ ಜೊತೆಗೆ ಅವನು ತನ್ನ ಬರಹಗಳಲ್ಲಿ ಬರೀ ಸಂಸ್ಕೃತಿಯನ್ನು ಮಾತ್ರವೇ ಹೇಳಿದ್ದಾನೆ ಎಂದು ಭಾವಿಸಬಾರದು. ಅವನಲ್ಲಿ ರಾಜಕೀಯ, ಸಾಂಸ್ಕೃತಿಕ, ತಾತ್ವಿಕ, ಮೊದಲಾದ ವಿಚಾರಧಾರೆಗಳ ಅನೇಕ ವಿಶ್ಲೇಷಣೆಯನ್ನು ಕಾಣುತ್ತೇವೆ. ಅವನ ಚಿಂತನೆಗಳು ಅನೇಕ ರೀತಿಯಲ್ಲಿ ಹರಡಿಕೊಂಡಿದೆ. ಆದ್ದರಿಂದ ಈವತ್ತಿಗೂ ಅವನು ಅತ್ಯಂತ ಮಹತ್ವದ ಚಿಂತಕ ಎನ್ನುವ ಹೆಸರನ್ನು ಪಡೆದುಕೊಂಡಿದ್ದಾನೆ. ಅವನ ಬರಹಗಳು ಮುಕ್ತವಾಗಿದೆ. ಅದರಲ್ಲಿ ಒಂದು ತಾತ್ವಿಕ ವಿವರಣೆಯು ಮಾತ್ರವೇ ಮುಂದೆ ಬರುತ್ತದೆ ಎಂದು ಹೇಳುವಂತಿಲ್ಲ. ಆದರೆ ಅವನನ್ನು ನೋಡುವಾಗ ನಾವು ಬರೀ ವೀಕ್ಷಕ ವಿವರಣೆಯನ್ನು ಮಾತ್ರವೇ ಮಾಡಬೇಕಾಗಿಲ್ಲ. ಯಾವುದೇ ಒಂದು ಕಾಠ್ಯಕ್ರಮವನ್ನು ನೋಡುವಾಗ ಅದಕ್ಕೆ ಒಂದು ರೂಪವು ಮಾತ್ರವೇ ಇದೆ ಎಂದು ಹೇಳಲು ಬರುವುದಿಲ್ಲ. ಅದರ ಹಿಂದೆ ರಾಜಕಾರಣ, ಆರ್ಥಿಕತೆ ಮತ್ತು ಸಾಮಾಜಿಕ ಸಂಗತಿಗಳೂ ಇರುತ್ತವೆ. ಕೆಲವು ನಮಗೆ ಕಾಣುತ್ತವೆ. ಮತ್ತೆ ಕೆಲವು ಕಾಣುವುದಿಲ್ಲ. ಮತ್ತೊಂದು ರೀತಿಯಲ್ಲಿ ಹೇಳುವುದಿದ್ದರೆ ಸಾಮಾಜಿಕ ಜೀವನದಲ್ಲಿ ಬಹುತ್ವ ಎನ್ನುವುದು ಕೆಲಸವನ್ನು ಮಾಡುತ್ತದೆ. ಇದನ್ನು ಇನ್ನೊಂದು ರೀತಿಯಲ್ಲಿಯೂ ಹೇಳಬಹುದು: ಸಮಾಜದಲ್ಲಿ ಬೇರೆ ಬೇರೆ ಗುಂಪುಗಳಿವೆ. ಅವು ನಿರ್ದಿಷ್ಟವಾದ ಕಾಠ್ಯವನ್ನು ಕೂಡಾ ಮಾಡುತ್ತವೆ. ಆದರೆ ಅದೇ ಕೆಲಸವನ್ನು ಮತ್ತೊಂದು ಗುಂಪು ಮಾಡುತ್ತದೆ ಎಂದು ಹೇಳುವಂತೆ ಇಲ್ಲ. ಅದರ ಸ್ವರೂಪವು ಬೇರೆ ಇರಬಹುದು. ಆದ್ದರಿಂದಲೇ ನಮಗೆ ಗ್ರಾಂಶಿಯು ಮುಖ್ಯವಾಗುತ್ತಾನೆ. ಅವನ ಕುರಿತು ಇಲ್ಲಿ ಕೇಶವ ಶರ್ಮ ಅವರು ಬರೆದಿದ್ದಾರೆ. ಕನ್ನಡದ ಓದುಗರಿಗೆ ಇದರಿಂದ ಹೆಚ್ಚು ಅನುಕೂಲವಾಗುತ್ತದೆ ಎಂದು ನಾವು ಭಾವಿಸುತ್ತೇವೆ.