Quantity
Product Description
ಖ್ಯಾತ ಗಡಿನಾಡ ಲೇಖಕಿ(ಕಾಸರಗೋಡು) ವಿಜಯಲಕ್ಷ್ಮಿ ಶಾನುಭೋಗ್ ಅವರ ಎಂಟನೆಯ ಕೃತಿ ಇತ್ತೀಚೆಗೆ ಪೈವಳಿಕೆ ಸಮೀಪದ ಬಾಯಿಕಟ್ಟೆ ಅಯ್ಯಪ್ಪ ಸಭಾಮಮದಿರದಲ್ಲಿ ಬಿಡುಗಡೆಯಾದ ' ವ್ಯೂಹ' ಎನ್ನುವ ಕಥಾಸಂಕಲನ. ಇದು ಹದಿನೈದು ಮನೋಜ್ಞ ಕಥೆಗಳನ್ನು ಒಳಗೊಂಡಿದೆ. ಸುತ್ತಮುತ್ತಲ ಸಾಮಾಜಿಕ ಬದುಕಿನಲ್ಲಿ ತಾವು ಕಂಡ ವೈವಿಧ್ಯಮಯ ವಸ್ತುಗಳನ್ನಾಧರಿಸಿ ವಿವಿಧ ರಚನಾತಂತ್ರಗಳನ್ನು ಬಳಸಿ ವಿಜಯಲಕ್ಷ್ಮಿಯವರು ಈ ಕಥೆಗಳನ್ನು ಸುಂದರವಾಗಿ ಹೆಣೆದಿದ್ದಾರೆ.
ಇಲ್ಲಿನ ಕಥೆಗಳನ್ನು ಮುಖ್ಯವಾಗಿ ಸ್ತ್ರೀಶೋಷಣೆ, ಪರಂಪರೆ ಮತ್ತು ಆಧುನಿಕತೆಗಳ ನಡುವಣ ಮುಖಾಮುಖಿ, ಭಾರತೀಯ ಸಂಸ್ಕೃತಿಯ ಬಗೆಗಿನ ಅಭಿಮಾನ ಮುಂತಾಗಿ ವಿಂಗಡಿಸಬಹುದು. ವ್ಯೂಹ ಎಂಬ ಕಥೆಯಲ್ಲಿ ಕಥಾನಾಯಕ ವಿಧವೆಯನ್ನು ಪ್ರೀತಿಸಿ ಮದುವೆಯಾಗ ಬಯಸುತ್ತಾನೆ. ಆದರೆ ಸಂಪ್ರದಾಯಸ್ಥ ಹಿರಿಯರು ಅದನ್ನು ವಿರೋಧಿಸುತ್ತಾರೆ. ಪರಿಣಾಮವಾಗಿ ಕಥಾನಾಯಕ ಮನೆ ಬಿಟ್ಟು ಹೋಗಿ ಸನ್ಯಾಸಿಯಾಗುತ್ತಾನೆ ಮತ್ತು ಹೆಣ್ಣು ಅತ್ಮಹತ್ಯೆ ಮಾಡಿಕೊಳ್ಳುತ್ತಾಳೆ. 'ಮಾತೆಲ್ಲ ಮುಗಿದ ಮೇಲೆ' ಕಥೆಯಲ್ಲಿ ಕಥಾನಾಯಕ ಚಿಕ್ಕವನಿದ್ದಾಗ ಊರಿನಲ್ಲಿ ಅನ್ಯ ಜಾತಿಯ ಹುಡುಗಿಯನ್ನು ಪ್ರೀತಿಸಿ ಅವಳನ್ನು ಮದುವೆಯಾಗುತ್ತೇನೆಂದು ಮಾತು ಕೊಟ್ಟಿರುತ್ತಾನೆ. ಆದರೆ ಬೆಂಗಳೂರಿನಲ್ಲಿ ಕೆಲಸ ಸಿಕ್ಕಿ ಊರು ಬಿಟ್ಟು ಹೋದ ಮೇಲೆ ಅಪ್ಪ ಹೇಳಿದ ಹುಡುಗಿಯನ್ನು ಭಯದಿಂದ ಮದುವೆಯಾಗುತ್ತಾನೆ. ಕೆಲವು ವರ್ಷಗಳ ನಂತರ ಊರಿಗೆ ಬಂದಾಗ ಅವಳು ಗಂಡನನ್ನು ಕಳೆದುಕೊಂಡು ಕಡು ಬಡತನದಿಂದ ಕಷ್ಟ ಪಡುವುದನ್ನು ನೋಡಲಾಗದೆ ಅವಳಿಗೆ ಆರ್ಥಿಕ ಸಹಾಯ ಮಾಡುತ್ತಾನೆ. 'ತಿರುವು'ಕಥೆಯಲ್ಲಿ ಕಥಾನಾಯಕ ಬೇರೆ ಜಾತಿಯ ಹುಡುಗಿಯನ್ನು ಪ್ರೀತಿಸಿ ಮದುವೆಯಾಗುತ್ತೇನೆಂದು ವಾಗ್ದಾನ ಮಾಡುತ್ತಾನೆ. ಅಪ್ಪ ಸ್ವಜಾತಿಯ ಹುಡುಗಿಯನ್ನು ಮದುವೆಯಾಗೆಂದು ಹೇಳಿದರೂ ಅವನ ಮನಸ್ಸು ಒಪ್ಪುವುದಿಲ್ಲ.ಆದರೆ ಆ ಸಮಯದಲ್ಲಿ ಆ ಊರಿನ ಗೇರು ತೋಟಗಳಿಗೆ ಸರಕಾರವು ಹೆಲಿಕಾಪ್ಟರ್ ನಿಂದ ಕೀಟನಾಶಕಗಳನ್ನು ಸಿಂಪಡಿಸಿದ ಪರಿಣಾಮವಾಗಿ ಜನರು ಗುಣವಾಗದ ವಿಚಿತ್ರ ಕಾಯಿಲೆಗಳಿಂದ ನರಳುತ್ತಾರೆ. ಕಥಾನಾಯಕ ಪ್ರೀತಿಸಿದ ಹುಡುಗಿಯೂ ಅದೇ ಕಾರಣದಿಂದ ಸಾಯುತ್ತಾಳೆ. ಆದ್ದರಿಂದ ಇಲ್ಲಿ ಖಳನಾಯಕನಾಗುವುದು ವಿಧಿ.
Weight
200 GMS
Width
14 CMS
Length
22 CMS
Height
2 CMS
Publication Year
2024
Author
Vijayalakshmi Shanubhog
Number of Pages
164
Publisher
Jagruthi Printers
Binding
Soft Bound
Language
Kannada