Quantity
Product Description
Neevu Hendathige Hedaruttira | H Dundiraj
ಈ ಲೇಖನದಲ್ಲಿ ಚರ್ಚಿಸಿರುವ ಸಂಗತಿಗಳು ಅವಿವಾಹಿತ ಗಂಡಸರಿಗೆ, ನಿಶ್ಚಿತಾರ್ಥ ಆದವರಿಗೆ ಮತ್ತು ಲಿವ್ ಇನ್ ರಿಲೇಶನ್ ಶಿಪ್ನಲ್ಲಿ ಇರುವವರಿಗೆ ಕೂಡಾ ಮದುವೆಯಾದ ನಂತರ ಉಪಯೋಗಕ್ಕೆ ಬರುತ್ತವೆ. ಪುರುಷರಷ್ಟೇ ಅಲ್ಲ, ವಿವಾಹಿತ ಮಹಿಳೆಯರೂ ಈ ಲೇಖನವನ್ನು ಓದಬೇಕು. ಆಗ ಅವರಿಗೆ ಗಂಡ ತಮಗೆ ಎಷ್ಟು ಹೆದುರುತ್ತಾನೆ ಎಂದು ತಿಳಿಯುತ್ತದೆ. ಒಂದು ವೇಳೆ ಹೆದರಿಕೆಯ ಪ್ರಮಾಣ ಕಡಿಮೆ ಇದ್ದರೆ ಹೆಚ್ಚಿಸಲು ಸೂಕ್ತ ಕ್ರಮ ತೆಗೆದುಕೊಳ್ಳಬಹುದು.
ಭೂಮಿಯಿಂದ ನೋಡಿದರೆ ಆಕಾಶ ದೊಡ್ಡ ಛತ್ರಿಯ ಹಾಗೆ ಕಾಣುತ್ತದೆ. ಆದರೆ ಅದು ಮಳೆ ಬಂದರೆ ಸೋರುವ ಮಹಾ ಛತ್ರಿ!
ಪುರಂದರದಾಸರು ಮಾನವನ ಬದುಕನ್ನು ಒಂದು ದೋಣಿಗೆ ಮತ್ತು ಪರಮಾತ್ಮನನ್ನು ಅಂಬಿಗನಿಗೆ ಹೋಲಿಸಿ ರಚಿಸಿದ 'ಅಂಬಿಗ ನಾ ನಿನ್ನ ನಂಬಿದೆ' ಎಂಬ ಕೀರ್ತನೆ ಅತ್ಯಂತ ಜನಪ್ರಿಯ. ಅದರಲ್ಲಿಅವರು ದೋಣಿಯ ಬದಲು 'ಹರಿಗೋಲು' ಎಂಬ ಪದ ಬಳಸಿರುವುದಕ್ಕೆ ಅವರು ಹರಿ ಭಕ್ತರಾಗಿರುವುದೇ ಕಾರಣವಾಗಿರಬಹುದೆ?
ಹಾಡುವ ಕಾಳಿಂಗ ರಾಯರಿಗೆ ಜೋಶ್ ಬರಬೇಕಾದರೆ ಸಭಾಂಗಣದಲ್ಲಿರುವ 'ಕೇಳಿಂಗ ರಾಯರು' ವ್ವಾ ವ್ವಾ ಅನ್ನಬೇಕು. ಚಿತ್ಪಾವನ ಬ್ರಾಹ್ಮಣರಲ್ಲಿ ಕೇಲ್ಕರ್ ಎಂಬ ಉಪನಾಮವಿದೆ. ಅದು ಮೂಲತಃ ಕೇಳ್ ಎಂಬ ಊರಿನಿಂದ ಬಂದವರನ್ನು ಸೂಚಿಸುತ್ತದೆ. ಚೆನ್ನಾಗಿ ಕೇಳುವ ಎಲ್ಲರಿಗೂ ಕೇಳ್ಳರ್ ಎಂಬ ಬಿರುದು ನೀಡಬಹುದು!
Author
H Dundiraj
Binding
Soft Bound
ISBN-13
9789354567537
Number of Pages
200
Publication Year
2025
Publisher
Sapna Book House Pvt Ltd
Height
2 CMS
Length
22 CMS
Weight
200 GMS
Width
14 CMS
Language
Kannada