ಹುಟ್ಟಿದ ಮಗು ತನ್ನ ಸುತ್ತಲಿನ ಪರಿಸರದಿಂದ ಬರುವ ಶಬ್ದಗಳಿಗೆ ಪ್ರತಿಕ್ರಿಯೆ ತೋರಿಸಲು ಪ್ರಾರಂಭಿಸುತ್ತದೆ. ಕೆಲವು ಮಕ್ಕಳು ತಮ್ಮ ಸುತ್ತಲಿನ ಯಾವ ಸದ್ದುಗಳಿಗೂ ಪ್ರತಿಕ್ರಿಯೆ ತೋರಿಸದೆ ಹೋದಾಗ ಮಗುವಿಗೆ ಕಿವುಡು ದೋಷ ಇರಬಹುದು ಎಂದು ಅನುಮಾನಿಸಬಹುದು. ಕಿವುಡು ದೋಷ ಇರುವುದನ್ನು ತತಜ್ಞರಿಂದ ಖಚಿತಪಡಿಸಿಕೊಂಡ ನಂತರ ಮಗುವಿಗೆ ಮಾತು ಕಲಿಸಲು ಏನೆಲ್ಲ ಉಪಾಯಗಳಿವೆ ಎಂಬುದನ್ನು ಹಲವು ಉದಾಹರಣೆಗಳ ಮೂಲಕ, ಚಿತ್ರ ವಿವರಣೆಯ ಮೂಲಕ ತಿಳಿಸಿಕೊಡುವ ಉಪಯುಕ್ತ ಪುಸ್ತಕ ಇದು.