Quantity
Product Description
ಎ.ಎಸ್. ಪ್ರಭಾಕರ ಅವರ ಕೃತಿ ಮುಗ್ಧ ನಗುವೊಂದರ ಕಣ್ಮರೆ. ನಟ ಪುನೀತ್ ರಾಜ್ ಕುಮಾರ್ ಅವರ ಬಗೆಗೆ ಸಂಪಾದಿತ ಕೃತಿ ಇದಾಗಿದೆ. ಸಾಹಿತಿ ಬರಗೂರು ರಾಮಚಂದ್ರಪ್ಪ ಅವರು ಕೃತಿಯ ಬೆನ್ನುಡಿಯಲ್ಲಿ ಹೇಳಿರುವಂತೆ, ತನ್ನ ಸಾರ್ವಜನಿಕ ನಡವಳಿಕೆ ಮತ್ತು ನಿರ್ವಹಿಸಿದ ಪಾತ್ರಗಳ ಮೂಲಕ ಡಾ.ರಾಜ್ ಅವರು ತಮ್ಮದೇ ನೆಲೆ ನಿಲುವುಗಳ ನೈತಿಕ ರೂಪಕವಾಗಿ ದಾಳಿದರು. ಬೆಳಗಿ ಬೆಳಕು ನೀಡಿದರು. ತಂದೆಯವರ ಸಾರ್ವಜನಿಕ ನಡವಳಿಕೆಯ ಮಾದರಿಯನ್ನು ಅನುಸರಿಸುತ್ತ ಬಂದವರು ಶಿವರಾಜ್ ಕುಮಾರ್, ರಾಘವೇಂದ್ರ ರಾಜಕುಮಾರ್ ಮತ್ತು ಪುನೀತ್ ರಾಜಕುಮಾರ್, ಈ ಕಾರಣಕ್ಕೆ ಕೂಡ ಪುನೀತ್ ಅವರ ಅಗಲಿಕೆ ಒಂದು ದೊಡ್ಡ ಸಾರ್ವಜನಿಕ ಆಘಾತ.ಯುವಕರಿಗೆ ಮಾದರಿಯಾಗಿದ್ದ ಕಲಾವಿದ ಇನ್ನಿಲ್ಲವಾದದ್ದು ಜನಪ್ರಿಯ ಸಂಸ್ಕೃತಿ ವಲಯದ ನಮ್ಮ ಸಿನಿಮಾ ಎಂಬ ಜನಪ್ರಿಯ ಸಂಸ್ಕೃತಿ ಪ್ರಕಾರದಲ್ಲಿ ಜವಾಬ್ದಾರಿಯಿಂದ ನಡೆದುಕೊಂಡು ಸದಭಿರುಚಿಯ ಸಾಕಾರವಾಗಿದ್ದ ಪುನೀತ್ ಎಂಬ ಸಶಕ್ತ ರೂಪಕ ಭೌತಿಕವಾಗಿ ಈಗ ಇಲ್ಲ. ಅವರ ಸಾವಿನೊಗೆ ಸರಳತೆ, ಸಜ್ಜನಿಕೆಗಳ ಸಿನಿಮಾ ವ್ಯಕ್ತಿತ್ವವೊಂದು ಮರೆಗೆ ಸರಿದುಹೋಗಿದೆ. ನೆನಪುಗಳನ್ನು ಬಿಟ್ಟು ನೆಲದ ಒಡಲು ಸೇರಿದೆ ಎಂಬುದಾಗಿ ಹೇಳಿದ್ದಾರೆ.
ನಾಗತಿಹಳ್ಳಿ ಚಂದ್ರಶೇಖರ್ ಅವರ ಮಾತಿನಲ್ಲಿ, ನಾನು ನೋಡಿರುವ ಹಾಗೆ ಶಿವಣ್ಣ, ಪುನೀತ್ ಅವರು ತಮ್ಮ ಸಮಕಾಲೀನ ನಟರ ಚಿತ್ರದ ಮುಹೂರ್ತ, ಶತದಿನ ಸಮಾರಂಭಗಳಿಗೆ ಹೋಗಿ ಕುಣಿದು, ಕುಪ್ಪಳಿಸಿ ಅವರನ್ನು ಖುಷಿಗೊಳಿಸುತ್ತಿದ್ದರು. ಬೇರೆಯವರ ಯಸ್ಸನ್ನು ಬೆರಗುಗಣ್ಣಿನಿಂದ ನೋಡುವುದಕ್ಕೆ ಒಳಗಿನಿಂದ ಒಂದು ಪ್ರೀತಿ ಬೇಕಾಗುತ್ತದೆ. ನಾವು ಬದುಕೋಣ, ಬೇರೆಯವರಿಗೂ ಬದುಕಲು ಬಿಡೋಣ ಏನುವ 46 ವರ್ಷಕ್ಕೆ ನಮ್ಮನ್ನು ಬಿಟ್ಟುಹೋಗಿರುವ ಅಪ್ಪು ಅವರು ಒಂದು ಮಾದರಿಯನ್ನು ತಮ್ಮ ತಂದೆಯವರ ಹಾಗೆ ಬಿಟ್ಟು ಹೋಗಿದ್ದಾರೆ. ನಮ್ಮ ಮುಂದಿನ ತಲೆಮಾರಿನವರು ಎಲ್ಲರ ಜೊತೆ ಪ್ರೀತಿಯಿಂದ ಬದುಕುವುದರ ಮೂಲಕ ಪುನೀತ್ ಅವರಿಗೆ ಅವರ ಕುಟುಂಬಕ್ಕೆ ಗೌರವ ಸಲ್ಲಿಸಬಹುದೆಂದು ನಾನು ಭಾವಿಸುತ್ತೇನೆ ಎಂಬುದಾಗಿ ಹೇಳಿದ್ದಾರೆ.
Publisher
Gauri Media
Author
Dr A S Prabhakar
Publication Year
2022
Number of Pages
200
Binding
Soft Bound
ISBN-13
9788195249411
Width
20 CMS
Weight
300 GMS
Language
Kannada