Quantity
Product Description
‘ಸಿ.ಎನ್. ರಾಮಚಂದ್ರನ್’ ನವಕರ್ನಾಟಕದ ಸಾಹಿತ್ಯ ಸಂಪದ- ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕನ್ನಡ ಲೇಖಕರ ಬದುಕು-ಬರೆಹ ಮಾಲಿಕೆಯಲ್ಲಿ ಪ್ರಕಟವಾದ ಕೃತಿ. ಲೇಖಕ, ಡಾ. ಸಿ. ನಾಗಣ್ಣ ಈ ಕೃತಿ ರಚಿಸಿದ್ದಾರೆ. ತಮ್ಮ ಅಖ್ಯಾನ-ವ್ಯಾಖ್ಯಾನ ಕೃತಿಗಾಗಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಗಳಿಸಿಕೊಂಡವರು ‘ಸಿ.ಎನ್. ರಾಮಚಂದ್ರನ್’ ಈ ಕೃತಿಯು ಅವರ ಬದುಕು-ಬರೆಹಗಳ ವಿವರಗಳನ್ನೊಳಗೊಂಡಿದೆ. ನಾಡಿನ ವಿದ್ವಾಂಸರಲ್ಲೊಬ್ಬರಾಗಿರುವ ರಾಮಚಂದ್ರನ್, ಇಂಗ್ಲಿಷ್, ಕನ್ನಡ ಭಾಷೆಗಳಲ್ಲಿ ಹಲವು ಪುಸ್ತಕಗಳನ್ನು ಬರೆದಿದ್ದಾರೆ. ಹೆಚ್ಚಾಗಿ ವಿದೇಶದಲ್ಲಿದ್ದು ತಮ್ಮ ಉದ್ಯೋಗದಲ್ಲಿ ನಿರತರಾಗಿದ್ದರೂ ಕನ್ನಡವನ್ನು ಮರೆತವರಲ್ಲ. ವಿದೇಶಿ ನೆಲದಲ್ಲಿಯ ಅಧ್ಯಾಪನ, ಅಧ್ಯಯನಗಳ ಹಿನ್ನೆಲೆಯಲ್ಲಿ, ನಾಡಿನ ಮೌಖಿಕ ಮಹಾಕಾವ್ಯಗಳನ್ನೂ ತೌಲನಿಕವಾಗಿ ಅಭ್ಯಸಿಸಿದ್ದಾರೆ. ಈ ಕೃತಿಯು ಅವರ ಎಲ್ಲ ಬಗೆಯ ಬರೆಹಗಳನ್ನು ಒಂದೊಂದಾಗಿ ವಿಶ್ಲೇಷಿಸಿ ಸಮಗ್ರ ಪರಿಚಯ ಮಾಡಿಸುತ್ತದೆ. ನಿರೂಪಣಾ ಶೈಲಿಯೂ ಅಷ್ಟೇ ಮಹತ್ವದ್ದಾಗಿದೆ.
Author
Dr C Naganna
Binding
Soft Bound
ISBN-13
9789389308426
Number of Pages
128
Publication Year
2020
Publisher
Nava Karnataka Publications Pvt Ltd
Height
2 CMS
Length
22 CMS
Weight
200 GMS
Width
14 CMS
Language
Kannada