Quantity
Product Description
ಗಿರೀಶ್ ರಾವ್ ಹತ್ವಾರ್.. ಈ ಹೆಸರು ಹೆಚ್ಚಿನ ಜನಕ್ಕೆ ಗೊತ್ತಿಲ್ಲ. ಯಾಕಂದ್ರೆ ಗಿರೀಶ್ ರಾವ್ ಹತ್ವಾರ್ ಸಾಹಿತ್ಯ ಲೋಕದಲ್ಲಿ ಹೆಸರು ಮಾಡಿರೋದು ಜೋಗಿ ಹೆಸರಿನಲ್ಲಿ. ಜೋಗಿ, ಜಾನಕಿ, ಎಚ್.ಗಿರೀಶ್ ರಾವ್, ಸತ್ಯವ್ರತ ಹೀಗೆ ವಿವಿಧ ಅಂಕಿತ ನಾಮಗಳ ಮೂಲಕ ಓದುಗರ ಮನ ಗೆದ್ದವರು ಜೋಗಿ. 1965ರ ನವೆಂಬರ್ 16ರಂದು ಸೂರತ್ಕಲ್ ಸಮೀಪದ ಹೊಸಬೆಟ್ಟು ಗ್ರಾಮದಲ್ಲಿ ಜನಿಸಿದ ಜೋಗಿ ವೃತ್ತಿಯಲ್ಲಿ ಪತ್ರಕರ್ತರು. ಖ್ಯಾತ ವಾರ ಪತ್ರಿಕೆ ಹಾಯ್ ಬೆಂಗಳೂರಿನಲ್ಲಿ ರವಿ ಕಾಣದ್ದು ಹಾಗೂ ಜಾನಕಿ ಕಾಲಂ ಮೂಲಕ ಓದುಗರ ಮನ ಗೆದ್ದವರು. ಪ್ರಸ್ತುತ ಕನ್ನಡ ಪ್ರಭ ದಿನಪತ್ರಿಕೆಯಲ್ಲಿ ಪುರವಣಿ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿರುವ ಜೋಗಿ ಸಾಕಷ್ಟು ಕೃತಿಗಳನ್ನು ರಚಿಸಿದ್ದಾರೆ. ಜೋಗಿ ಅವರ ಕೆಲಸವನ್ನ ಪರಿಗಣಿಗಿ ವಡ್ಡರ್ಸೆ ರಘುರಾಮ ಶೆಟ್ಟಿ ಪತ್ರಿಕೋದ್ಯಮ ಪ್ರಶಸ್ತಿ ಸೇರಿದಂತೆ ಸಾಕಷ್ಟು ಪ್ರಶಸ್ತಿಗಳು ಜೋಗಿ ಅವರನ್ನ ಅರಸಿಕೊಂಡು ಬಂದಿವೆ.
Author
Jogi
Binding
Soft Bound
Number of Pages
100
Publication Year
2025
Publisher
Ankitha Pusthaka
Height
1 CMS
Length
22 CMS
Weight
100 GMS
Width
14 CMS
Language
Kannada