Quantity
Product Description
ಬದುಕಿನ ಕಾಲಘಟ್ಟಗಳಲ್ಲಿ ಕಳೆದುಕೊಂಡಿರುವುದನ್ನು ಮರಳಿ ಪಡೆಯುವ ಸಂಬಂಧಾಂತರಗಳ ಶೋಧ ಆಶಾರಘು ಅವರ ಕಥೆಗಳ ಸ್ಥಾಯಿಗುಣ. ತಾವು ಆಯ್ದುಕೊಂಡ ವಸ್ತುವಿಗೆ ತಕ್ಕ ಆವರಣವನ್ನು ಸೃಷ್ಟಿಸಿಕೊಂಡು ಹದವಾದ ಗದ್ಯದಲ್ಲಿ ಕಥನವನ್ನು ನಿರೂಪಿಸುವ ಕಲೆ ಈ ಲೇಖಕಿಗೆ ಸರಾಗವಾಗಿ ಸಾಧಿತವಾಗಿರುವುದರಿಂದ ಇಲ್ಲಿನ ರಚನೆಗಳು ಮನದಲ್ಲಿ ಉಳಿದುಬಿಡುತ್ತವೆ. ಓದಿದ ಬಳಿಕ ಹಲವು ಕಾಲ ಮನಸ್ಸನ್ನು ಆವರಿಸಿಕೊಂಡು ಕಾಡಬಲ್ಲ ಕಥೆಗಳು ಇಲ್ಲಿವೆ.
-ಡಾ.ಎಚ್.ಎಸ್. ಸತ್ಯನಾರಾಯಣ
ಸಶಕ್ತ ಬರವಣಿಗೆ, ಭಾಷಾಸಮೃದ್ಧಿ ಆಶಾ ಅವರ ಕಥನಕಲೆಯ ವೈಶಿಷ್ಟ್ಯಗಳು. ಕೆಂಪು ದಾಸವಾಳ ಕಥಾಸಂಕಲನದ ಕಥೆಗಳು ಅದನ್ನು ವಿಪುಲವಾಗಿ ಒಡನುಡಿಯುತ್ತವೆ. ಸಾಂಸಾರಿಕ ಸಂಬಂಧಗಳ ಸೂಕ್ಷ್ಮತೆ, ಸಂಕೀರ್ಣ ತಲ್ಲಣಗಳು ವ್ಯಕ್ತ ಅವ್ಯಕ್ತ ಸ್ವರೂಪಗಳಲ್ಲಿ ಕತೆಯಾಗಿ ಬೆಳೆದು ನಿಲ್ಲುವ ಬೆರಗು ಈ ಕತೆಗಳಲ್ಲಿದೆ.
-ಜಯಶ್ರೀ ದೇಶಪಾಂಡ
'ಕೆಂಪು ದಾಸವಾಳ' ಎಂಬ ವಿಶೇಷ ಹೆಸರಿನ ಈ ಕಥಾಸಂಕಲನದಲ್ಲಿ ಅಷ್ಟೇ ವಿಶೇಷವಾದ ಕತೆಗಳಿವೆ. ಬದುಕು, ಸಾವು, ಸೂತಕ, ಮಿಲನ, ಸಂಪ್ರದಾಯ, ಸಂಪ್ರದಾಯ-ಆಧುನಿಕತೆಯ ಮುಖಾಮುಖಿ ಮತ್ತು ತಿಕ್ಕಾಟ, ಹುಡುಕಾಟದ ಮುನ್ನೆಲೆಯ ಕತೆಗಳಿವೆ. ಮನುಷ್ಯನನ್ನು ಅಂತರಂಗದಿಂದ ಹೊಸ ಕಾಣ್ಕೆಯನ್ನು ನೋಡುವ ರೀತಿಯನ್ನು ಬದಲಾಯಿಸುವ ತೀವ್ರ ಸಂಗತಿಗಳೆಂದರೆ ಸಾವು ಮತ್ತು ಕಾಮ. ಅದು ಈ ಕಥಾಸಂಕಲನದಲ್ಲಿ ದಟ್ಟವಾಗಿಯೂ ಗಾಢವಾಗಿಯೂ ಕೂಡಿದ್ದು ಮತ್ತಷ್ಟು ಹೊಳಹುಗಳನ್ನು ಹೊಳೆಸುತ್ತದೆ.
- ಜಯರಾಮ ಚಾರಿ
ಕಥೆಯ ಘಟ್ಟಗಳನ್ನು ಹೇಳುವಾಗ ಆಶಾ ರಘು ಅವರದ್ದು ಎಚ್ಚರದ ನಡಿಗೆ. ಅದರಲ್ಲೂ ಸಾಂಕೇತಿಕ ಪರಿಭಾಷೆಯ ಹೆಣಿಗೆಯು ಸುಂದರ ಎಂ.ಕೆ. ಇಂದಿರಾ, ತ್ರಿವೇಣಿ ಅವರ ನವ್ಯ ಕಾಲದ ಕಾದಂಬರಿಗಳಲ್ಲಿ ಕಾಣುವ ಕಥಾ ಆಯ್ಕೆ, ಅಲ್ಲಿನ ಪರಿಸರ, ಪಾತ್ರಗಳನ್ನು ನಾವು ಓದಿ ಮರೆತಿರಬಹುದು. ಆದರೆ ಆಶಾ ರಘು ಅವರ ಶೈಲಿಯನ್ನು, ಆ ರೀತಿಯ ಕಥಾಹಂದರವನ್ನು, ಓದುಗರಿಗೆ ಮತ್ತೆ ನೆನಪಿಸಿದ್ದಾರೆ.
-ಶ್ರೀಧರ ಬನವಾಸಿ
Author
Asha Raghu
Binding
Soft Bound
Number of Pages
128
Publication Year
2025
Publisher
Upasana Books
Height
1 CMS
Length
22 CMS
Weight
200 GMS
Width
14 CMS
Language
Kannada