Select Size
Quantity
Product Description
ಪರಿಸರ, ಪರಿಸರದೊಂದಿಗಿನ ಒಡನಾಟದ ಅನುಭವಗಳು, ಪರಿಸರ ವ್ಯಾಪಾರಗಳನ್ನು ನಿಕಷಕ್ಕೆ ಒಡ್ಡುವುದು ಮುಂತಾದ ವಿಷಯಗಳ ಕುರಿತಾಗಿ ಆಪ್ತವಾಗಿ ಬರೆಯುವವರ ಸಂಖ್ಯೆ ಕಡಿಮೆ. ಕಾಡು, ಬೆಟ್ಟ, ಪಕ್ಷಿ ಪ್ರಪಂಚ, ಮರ, ಗಿಡ, ಬಳ್ಳಿಗಳನ್ನು ಎಲ್ಲರೂ ನೋಡಿರುತ್ತಾರೆ; ಆದರೆ ಅವುಗಳ ನಡುವಿನ ಸಂಬಂಧವನ್ನು ಗುರುತಿಸಿ, ಈ ವಿಸ್ಮಯಭರಿತ ಲೋಕದ ಬೆರಗುಗಳನ್ನು ಅಕ್ಷರರೂಪದಲ್ಲಿ ದಾಖಲಿಸುವವರು ವಿರಳ. ಅಂತಹ ಅಪರೂಪದ ಪ್ರಯತ್ನದಲ್ಲಿ ತೊಡಗಿಕೊಂಡು, ಬರಹಗಳನ್ನು ಬರೆದು, ಪ್ರಕಟಿಸಿ, ಸಂಕಲನ ರೂಪದಲ್ಲಿ ಹೊರತರುತ್ತಿದ್ದಾರೆ ನವೀನಕೃಷ್ಣ ಎಸ್. ಉಪ್ಪಿನಂಗಡಿಯವರು. ತಮ್ಮ ಸುತ್ತಲಿನ ಪರಿಸರವನ್ನು ಸೂಕ್ಷ್ಮವಾಗಿ ಅವಲೋಕಿಸಿದ್ದು ಮಾತ್ರವಲ್ಲ, ಅಲ್ಲಿ ಕಂಡುಬರುವ ಅಪರೂಪದ ಸಂಗತಿಗಳನ್ನು ಹೆಕ್ಕಿತೆಗೆದು, ವಿಶ್ಲೇಷಣೆಗೊಳಪಡಿಸಿ ಬರಹರೂಪಲ್ಲಿ ದಾಖಲಿಸಿರುವ ಅವರ ಈ ಅಕ್ಷರಾಭಿಯಾನ ನಿಜಕ್ಕೂ ಅಭಿನಂದನಾರ್ಹ.
ಈ ಪುಸ್ತಕದಲ್ಲಿ ಮೂರು ಭಾಗಗಳಿವೆ : ಮೊದಲ ಭಾಗದಲ್ಲಿ ಲೇಖಕರು ಕ್ಯಾಮೆರಾ ಹಿಡಿದು ಹಕ್ಕಿಗಳನ್ನು ಸೆರೆಹಿಡಿಯಲು ಹೊರಟಾಗ ಗಮನಿಸಿದ ಪ್ರಾಕೃತಿಕ ವಿದ್ಯಮಾನಗಳು ದಾಖಲಾಗಿವೆ. ಹಕ್ಕಿ, ಕೀಟ, ಪಾತರಗಿತ್ತಿ, ಹಾರುವ ಓತಿ ಹೀಗೆ ನಾನಾ ಜೀವಿಗಳು ವಾಸಿಸುವ ಕಾಡಿನ ಇಕಾಲಜಿಯ ಸರಪಣಿಯನ್ನು ಇಲ್ಲಿನ ಬರಹಗಳು ಪರಿಚಯಿಸುತ್ತವೆ. ಈ ಪುಸ್ತಕದ ಎರಡನೆಯ ಭಾಗದಲ್ಲಿ ನಿಸರ್ಗದ ನಡುವಿನ ಚಾರಣದ ಅನುಭವಗಳು ದಾಖಲಾಗಿವೆ. ಮೂರನೆಯ ಭಾಗದಲ್ಲಿ ಪರಿಸರಕ್ಕೆ ಸಂಬಂಧಿಸಿದ ಪುಸ್ತಕಗಳ ವಿಮರ್ಶಾತ್ಮಕ ಬರಹಗಳಿದ್ದು, ಲೇಖಕರ ಓದಿನ ವ್ಯಾಪ್ತಿಯ ಪರಿಚಯ ಮಾಡಿಸುತ್ತವೆ. ಲೇಖಕರು ಈ ಕಿರಿಯ ವಯಸ್ಸಿನಲ್ಲೇ ಪರಿಸರಕ್ಕೆ ಸಂಬಂಧಿಸಿದ ಹಲವು ಲೇಖನಗಳನ್ನು ಆಪ್ತವಾಗಿ ಬರೆಯುತ್ತಿದ್ದಾರೆ ಎಂಬುದು ವಿಶೇಷ.
ನವೀನಕೃಷ್ಣ ಎಸ್. ಉಪ್ಪಿನಂಗಡಿಯವರ ಅಕ್ಷರ ಸಾಹಸಗಳು ಅವರನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಲಿ ಎಂದು ಮನಸಾರೆ ಹಾರೈಸುತ್ತೇನೆ.
Binding
Soft Bound
Author
Naveen Krishna S Uppinangadi
Number of Pages
128
Publisher
Sneha Book House
Publication Year
2025
Height
1 CMS
Length
22 CMS
Weight
100 GMS
Width
14 CMS
Language
Kannada