Product Description
ಈ ಅಪೂರ್ವ ಕೃತಿಯ ಪುಟಗಳಲ್ಲಿ, ವಿಶ್ವದಾದ್ಯಂತ ಪುಸ್ತಕಪ್ರಿಯರಲ್ಲಿ ರೋಮಾಂಚನ ಸೃಷ್ಟಿಸಿದ ದಿ ಮಾಂಕ್ ಹೂ ಸೋಲ್ಡ್ ಹಿಸ್ ಫೆರಾರಿ ಕೃತಿಯ ಪ್ರಖ್ಯಾತ ಲೇಖಕ ಹಾಗೂ ಅಂತಾರಾಷ್ಟ್ರೀಯ ಖ್ಯಾತಿಯ ನಾಯಕತ್ವ ಗುರು ರಾಬಿನ್ ಶರ್ಮಾ ನಿಮಗೆ ನಿಮ್ಮ ಮಗುವಿನ ನಿಸರ್ಗದತ್ತ ನಾಯಕತ್ವ ಸಾಮರ್ಥ್ಯವನ್ನು ಬಿಡುಗಡೆಗೊಳಿಸುವ ಸರಲ ಆದರೆ ಅಷ್ಟೇ ಪರಿಣಾಮಕಾರಿಯಾದ ವ್ಯವಸ್ಥೆಯನ್ನು ಅನಾವರನಗೊಳಿಸುವ ಜೊತೆಗೆ ನಿಮಗಾಗಿಯೂ ನೀವು ಹೆಚ್ಚು ಸಮೃದ್ಧ ಮತ್ತು ಸಾರ್ಥಕ ಜೀವನವನ್ನು ಹೇಗೆ ಸೃಷ್ಟಿಸಿಕೊಳ್ಳಬಹುದೆಂಬುದನ್ನು ನಿರೂಪಿಸಿದ್ದಾರೆ. ಅಗಾಧವಾದ ಒಳನೋಟ ಮತ್ತು ಹೃದಯಸ್ಪರ್ಶಿ ಉತ್ಸಾಹದಿಂದ ಅವರು ನಿಮಗೆ ಕುಟುಂಬ ನಾಯಕನ 5 ಪ್ರಾವೀಣ್ಯತೆಗಳನ್ನು ಪ್ರಾಯೋಗಿಕ ಪಾಠಗಳ ಸಹಿತವಾಗಿ ಸುಲಭವಾಗಿ ಅರ್ಥವಾಗುವಂತೆ ಬೋಧಿಸಿದ್ದಾರೆ.