Product Description
ಪ್ರಸಿದ್ಧರಾಗಿರುವ ವ್ಯಕ್ತಿಗಳ ಮಡದಿಯ ಸ್ಥಾನ ಕತ್ತಿಯಂಚೇ ಹೌದು. ಪ್ರಸಿದ್ಧ ವ್ಯಕ್ತಿಗಳಿಗೆ ತಮಗೆ ದೊರೆತ ಸ್ಥಾನಮಾನವನ್ನು ಕಾದಿಟ್ಟುಕೊಳ್ಳುವುದು ಮುಖ್ಯವಾಗುತ್ತದೆ. ಅವರು ತಮ್ಮ ಮನೆ ಹಾಗೂ ಮಕ್ಕಳ ಜವಾಬ್ದಾರಿಯನ್ನು ಸಂಪೂರ್ಣವಾಗಿ ಹೆಂಡತಿಯ ಮೇಲೆ ಹೊರಿಸುತ್ತಾರೆ. ಗಾಂಧೀಜಿಯವರು ಮಹಾ ದರ್ಪಿಷ್ಠರು. ಹೆಂಡತಿಯೆನಿಸಿಕೊಂಡವಳು ಅಂಕೆಯಲ್ಲಿರಬೇಕು. ಆಕೆ ಭೋಗದ ವಸ್ತು. ಯಾವಾಗ ಬೇಕಾದರೂ ಎಲ್ಲಿ ಬೇಕಾದರೂ ಅಧಿಕಾರ ಚಲಾಯಿಸಬಹುದು. ತಾನು ಹೇಳಿದ ಹಾಗೆ ಆಕೆ ಕೇಳಿಕೊಂಡಿರಬೇಕು. ಆಕೆಗೆ ಸ್ವಂತ ಭಾವನೆಗಳಿರುವುದಿಲ್ಲ - ಇತ್ಯಾದಿ ನಿಲುವು ಗಾಂಧೀಜಿಯವರದ್ದು. ಕಸ್ತೂರಬಾ ಅವರದ್ದು ಮೃದು ಸ್ವಭಾವ. ಆದರೆ ಮಹಾ ಸ್ವಾಭಿಮಾನಿ. ಆಕೆಗೆ ಸಾರ್ವಜನಿಕ ಬದುಕಿಗಿಂತ ಖಾಸಗೀ ಬದುಕೇ ಇಷ್ಟ. ಆದರೆ ಗಾಂಧೀಜಿಯವರಿಗೆ ಕಸ್ತೂರಬಾ ತನ್ನ ಸಮನಕ್ಕೆ ಹೆಜ್ಜೆ ಹಾಕುತ್ತಿಲ್ಲ ಎನ್ನುವ ಕೋಪ. ಆರಂಭದಲ್ಲಿ ಪ್ರತಿಭಟಿಸುವ ಕಸ್ತೂರಬಾ ಕ್ರಮೇಣ ತಮ್ಮನ್ನು ಬದಲಿಸಿಕೊಳ್ಳುತ್ತಾರೆ. ಅದಕ್ಕೆ ಸರಿಯಾಗಿ ಗಾಂಧೀಜಿಯವರೂ ಸ್ಪಂದಿಸುತ್ತಾರೆ. ಕೊನೆಗೆ ಕಸ್ತೂರಬಾ, ಗಾಂಧೀಜಿಯವರ ಎದೆಯ ಮೇಲೆಯೇ ಪ್ರಾಣಬಿಡುತ್ತಾರೆ. ಕಸ್ತೂರಬಾ ಅವರನ್ನು ಡಾ|| ಗೀತಾ ಶೆಣೈ ಈ ಕೃತಿಯಲ್ಲಿ ಸೊಗಸಾಗಿ ಪರಿಚಯಿಸಿದ್ದಾರೆ.