Quantity
Product Description
ಬದುಕು ಪ್ರೀತಿಯ ಈ ಸಂಕಲನ 'ಡಿಜಿಟಲ್ ವ್ಯಸನ'ದಿಂದ ಹೊರಕ್ಕೊಂದು ದಾರಿ ಕಾಣಿಸಿದೆ; ಬದುಕ ಗೆಲ್ಲುವ ಸಾಧ್ಯತೆಯನ್ನು ಬದುಕಿ ತೋರಿಸಿದವರ ಅನುಭವಸಾರವಿದೆ. ಸಾವು ಯಾವುದಕ್ಕೂ ಪರಿಹಾರವಲ್ಲ. ವ್ಯಕ್ತಿ ಸತ್ತರೂ ಸಮಸ್ಯೆಗಳು ಸಾಯುವುದಿಲ್ಲ, ಪರಿಹಾರದ ಹಾದಿ ಸರಳವಿದೆ, ಜೀವನ ಕೌಶಲದ ನಿಜಬದುಕಿನ ಭರವಸೆಯ ಕತೆಗಳು ಇಲ್ಲಿವೆ. * * ಕೃತಿಯ ಲೇಖಕಿ ನೇಮಿಚಂದ್ರ ಕತೆಗಾರ್ತಿಯಾಗಿ, ಅಂಕಣಕಾರ್ತಿಯಾಗಿ ಪರಿಚಿತರು. ಬರಹದಲ್ಲಿ ವಿಶಿಷ್ಟ ಶೈಲಿಯನ್ನು ರೂಢಿಸಿಕೊಂಡವರು. ಸಮಾಜದ ಬಗ್ಗೆ, ಮಾನಸಿಕ ಸ್ವಾಸ್ಥ್ಯದ ಬಗ್ಗೆ, ಮಹಿಳೆಯರ ಬಗ್ಗೆ ವಿಶೇಷ ಕಳಕಳಿ ಉಳ್ಳವರು. ಪ್ರವಾಸಾಸಕ್ತ ಸಾಹಸಿ. ಇವರ 'ಬದುಕು ಬದಲಿಸಬಹುದು', 'ಸಾವೇ, ಬರುವುದಿದ್ದರೆ ನಾಳೆ ಬಾ|', 'ಸೋಲೆಂಬುದು ಅಲ್ಪವಿರಾಮ', 'ಸಂತಸ, ನನ್ನೆದೆಯ ಹಾಡುಹಕ್ಕಿ', 'ಪೆರುವಿನ ಪವಿತ್ರ ಕಣಿವೆಯಲ್ಲಿ', 'ಯಾದ್ ವಶೇಮ್', 'ಭಾವೇಶ್ ಭಾಟಿಯಾ', 'ನೋವಿಗದ್ದಿದ ಕುಂಚ', 'ಹೋರಾಟದ ಹಾದಿಯಲ್ಲಿ ಧೀಮಂತ ಮಹಿಳೆಯರು', 'ಮಹಿಳಾ ವಿಜ್ಞಾನಿಗಳು' ಮುಂತಾದ ಕೃತಿಗಳು ನವಕರ್ನಾಟಕದಿಂದ ಪ್ರಕಟವಾಗಿವೆ. ವೃತ್ತಿಯಿಂದ ಇಂಜಿನಿಯರ್ ಆದ ಲೇಖಕಿ, 'ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್'ನಲ್ಲಿ ಚೀಫ್ ಡಿಸೈನರ್ ಮತ್ತು ಜೆನರಲ್ ಮ್ಯಾನೇಜರ್ ಹುದ್ದೆಗಳಲ್ಲಿ ದುಡಿದವರು. ನವಕರ್ನಾಟಕದ 'ವಿಶ್ವಮಾನ್ಯರು' ಮಾಲಿಕೆಯಲ್ಲಿ ಇವರ ಹಲವು ಕೃತಿಗಳು ಪ್ರಕಟವಾಗಿವೆ.
Binding
Soft Bound
Author
Nemichandra
Number of Pages
200
Publisher
Nava Karnataka Publications Pvt Ltd
Publication Year
2025
Height
2 CMS
Length
22 CMS
Width
14 CMS
Weight
200 GMS
Language
Kannada