Product Description
ಭಾರತ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಜೀವ ಬಲಿದಾನ ನೀಡಿದವರಲ್ಲಿ ಭಗತ್ ಸಿಂಗ್ ಅಗ್ರಗಣ್ಯರು. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಯುವಜನರು ತೊಡಗಿಸಿಕೊಳ್ಳುವಂತೆ ಪ್ರೇರಣೆ ನೀಡಿದ್ದಷ್ಟೇ ಅಲ್ಲ, ಸ್ವತಂತ್ರ ಭಾರತವು ಧರ್ಮನಿರಪೇಕ್ಷ, ಜಾತಿ ಭೇದ, ಕೋಮು ಭೇದರಹಿತ, ಪ್ರಜಾಪ್ರಭುತ್ವವಾದಿ ಮತ್ತು ಸಮಾಜವಾದಿ ಪಥದಲ್ಲಿ ಮುನ್ನಡೆಯುವ ಬಗ್ಗೆ ಕನಸು ಕಂಡಿದ್ದರು ಭಗತ್ ಸಿಂಗ್. ಅವರ ಸಂಗಾತಿಗಳನ್ನು ಮತ್ತು ಕ್ರಾಂತಿಕಾರಿ ಭಗತ್ ಸಿಂಗ್ ಅವರನ್ನು ತಮ್ಮ ಹಿಂದುತ್ವ ಪರಿವಾರದವರೆಂದು ಹೇಳಿಕೊಂಡು ಅವರ ತೇಜೋವಧೆ ಮಾಡುವ ಪ್ರಯತ್ನ ಇತ್ತೀಚೆಗೆ ನಡೆಯುತ್ತಿದೆ. ಅದನ್ನು ಬಯಲಿಗೆ ಎಳೆದು ಭಗತ್ ಸಿಂಗ್ ಅವರ ಕ್ರಾಂತಿಕಾರಿ ಬಿಂಬವನ್ನು ಯಥಾವತ್ತಾಗಿ ಜನಮನದಲ್ಲಿ ಮೂಡಿಸುವುದಕ್ಕೆ ಈ ಕಿರುಹೊತ್ತಿಗೆಯು ಸಹಾಯಕವಾಗಲಿದೆ.