Quantity
Product Description
ಉಷಾನರಸಿಂಹನ್ ಅವರು ನನಗಿಂತಲೂ ಹಿರಿಯರು, ನನಗಿಂತಲೂ ಹೆಚ್ಚು ಓದಿಕೊಂಡವರು, ನನಗಿಂತಲೂ ಹೆಚ್ಚು ವಿಷಯಗಳ ಬಗ್ಗೆ ನನಗಿಂತಲೂ ಹೆಚ್ಚು ಬರೆದವರು. ಉಷಾ ಅವರು ಕಥೆ, ಕಾದಂಬರಿಗಳು, ನಾಟಕಗಳು, ಲಲಿತ ಪ್ರಬಂಧಗಳು ಮತ್ತು ಕವನ ಸಂಕಲನದ ಜೊತೆಯಲ್ಲಿ ವಿಮರ್ಶಾ ಲೇಖನಗಳನ್ನೂ ಬರೆದವರು. ಅಕಾಡೆಮಿಕ್ಸ್ ನಲ್ಲಿರುವವರನ್ನು ಹೊರತುಪಡಿಸಿದರೆ, ಹೀಗೆ ಸಾಹಿತ್ಯದ ವಿವಿಧ ಪ್ರಕಾರಗಳಿಗೆ ತೆರೆದುಕೊಂಡವರು ವಿರಳ. ಇನ್ನು ಇಷ್ಟು ಪ್ರಕಾರಗಳಲ್ಲಿ ಬರೆದವರು ಇನ್ನೂ ವಿರಳ.
ಅವರ ನಾಟಕಗಳನ್ನು ಓದಿರುವ ನಾನು ಅವರಲ್ಲಿನ ದೃಶ್ಯ ಕಟ್ಟುವಿಕೆಯ ಕುಸುರಿತನಕ್ಕೆ ಸೋತಿದ್ದೇನೆ. ದೃಶ್ಯ, ಅಂಕಗಳನ್ನು ಅವರು ವಿಭಜಿಸುವ ರೀತಿ ಮತ್ತು ದೃಶ್ಯಗಳನ್ನು ಕಟ್ಟುತ್ತಲೇ ಅವುಗಳ ಹಿಂದೆ ಅವರು ಕಟ್ಟುವ ಭಾವಲೋಕ ಅನನ್ಯವಾದುದು. ನಾಟಕದ ಮಟ್ಟಿಗೆ ಮಾತ್ರವಲ್ಲ, ಅವರ ಕಾದಂಬರಿ, ಕಥಾಸಂಕಲನಗಳ ಪಾಲಿಗೂ ಅಷ್ಟೇ ಸತ್ಯ ನನಗೆ ಅಚ್ಚರಿ ಅನ್ನಿಸಿದ್ದು ಅವರ ವಿಮರ್ಶಾ ಲೇಖನಗಳನ್ನು ಓದುವಾಗ ಏಕೆಂದರೆ, ವಿಷಯದ ಸಾಂದ್ರತೆ ಒಂದಿಷ್ಟೂ ಲಘುವಾಗದ ಹಾಗೆ ಸಾಮಾನ್ಯ ಓದುಗರನ್ನು ಅದರಲ್ಲಿ ಹಿಡಿದಿಟ್ಟುಕೊಳ್ಳುವುದು ಸುಲಭದ ಮಾತಲ್ಲ. ಸರಳವಾದ ಭಾಷೆಯಲ್ಲಿಯೇ ಇವರು ಬರೆಯುವ ವಿಮರ್ಶಾ ಲೇಖನಗಳು ಘನವಾಗಿದ್ದುಕೊಂಡು ಅನನ್ಯತೆಯನ್ನು ಸಾಧಿಸುತ್ತವೆ.
ಈಗಾಗಲೇ ಹಲವಾರು ಕಥಾಸಂಕಲನಗಳನ್ನು ತಂದಿರುವ ಉಷಾ ಅವರು ಈಗ ತರುತ್ತಿರುವ ಕಥಾಸಂಕಲನದ ಹೆಸರು 'ಕಾಲ ಹೊರಳಿನ ಚಹರೆ'. ಇದು ಈ ಪುಸ್ತಕಕ್ಕೆ ಸಮರ್ಪಕವಾದ ಹೆಸರು. ಪ್ರತಿಯೊಂದು ಕಾಲಘಟ್ಟದಲ್ಲಿಯೂ ಸಮಾಜ, ಸಂಬಂಧಗಳು, ಸಾಹಿತ್ಯ ಎಲ್ಲವೂ ಒಂದು ಹೊಸ ಹೊರಳನ್ನು ತೆಗೆದುಕೊಳ್ಳುತ್ತದೆ.
ಉಷಾ ಅವರಿಗೆ ಅದ್ಭುತವಾದ ಹಾಸ್ಯಪ್ರಜ್ಞೆ ಇದೆ. ಅವರ ಲಲಿತ ಪ್ರಬಂಧಗಳು ಅದಕ್ಕೆ ಸಾಕ್ಷಿ. ಆದರೆ ಕಥೆಗಳನ್ನು ಬರೆಯುವಾಗ ಅವರ ಶೈಲಿ ಸಂಪೂರ್ಣ ಭಿನ್ನ. ಅವರ ನಾಟಕಗಳ ಶೈಲಿ ಇನ್ನೊಂದು ಬಗೆಯದು. ಇದು ನನ್ನನ್ನು ಬಹುವಾಗಿ ಗಮನಸೆಳೆದ ಅಂಶ. ಅವರಿಗಿಂತ ಕಿರಿಯಳಾದ ನನ್ನ ಮೇಲೆ ಮುನ್ನುಡಿ ಬರೆಯುವ ಹೊಣೆಯನ್ನು ಹೊರಿಸುವ ಮೂಲಕ ಅವರು ನನಗೆ ಸೊಗಸಾದ ಕಥೆಗಳನ್ನು ಓದುವ ಅವಕಾಶ ಸಹ ಮಾಡಿಕೊಟ್ಟಿದ್ದಾರೆ. ಅದಕ್ಕಾಗಿ ಅವರಿಗೆ ನಾನು ಋಣಿ.
Author
Usha Narasimhan
Binding
Soft Bound
ISBN-13
9789348355560
Number of Pages
200
Publication Year
2025
Publisher
Veeraloka Books Pvt Ltd
Height
3 CMS
Length
22 CMS
Weight
300 GMS
Width
14 CMS
Language
Kannada