Select Size
Quantity
Product Description
ಈ ಜಗತ್ತೇ ಒಂದು ವಿಸ್ಮಯ ಮತ್ತು ಪರಮಾದ್ಭುತ! ಹಲವು ವೈವಿಧ್ಯ-ವೈಚಿತ್ರ್ಯಗಳ ತಾಣ. ಇಲ್ಲಿನ ನಿಸರ್ಗ ನಿರ್ಮಿತ ಹಾಗೂ ಮಾನವ ನಿರ್ಮಿತ ಘಟನೆಗಳೆಲ್ಲವೂ ಖುಷಿಕೊಡುವಂಥವು. ಆಧ್ಯಾತ್ಮಿಕ ಹಿನ್ನೆಲೆಯಲ್ಲಿ ಜಗತ್ತನ್ನರಿಯಲು ಒಳಗಣ್ಣು ತೆರೆ ಎನ್ನುತ್ತಾರೆ ದಾರ್ಶನಿಕರು. ವೈಜ್ಞಾನಿಕ ನೆಲೆಯಲ್ಲಿ ಇದನ್ನರಿಯಲು ಕಣ್ಣುಮುಚ್ಚಿಕೊಂಡರೆ ಏನೂ ಫಲವಿಲ್ಲ. ಹೊರಗಣ್ಣನ್ನು ತೆರೆದೇ ಜಗತ್ತನ್ನು, ಅದರ ಸೌಂದರ್ಯವನ್ನೂ ಸವಿಯಬೇಕು. ಎಷ್ಟೊಂದು ಬಗೆಯ ಜೀವಜಾಲಗಳು! ಅವು ಜೀವಿಸಲು ನಡೆಸುವ ಹೋರಾಟಗಳು ಅಸಂಖ್ಯ. ಸಾಗರದಾಳದ ಜೀವಿಗಳ ಬದುಕೇ ಒಂದು ತೆರನಾದರೆ ಆಕಾಶಗಾಮಿ ಪಕ್ಷಿಗಳ ಹಾರಾಟ ಅಷ್ಟೇ ಚಾಕಚಕ್ಯತೆಯಿಂದ ಕೂಡಿದ್ದು. ಇಲ್ಲಿ ಹೇಳಲ್ಪಟ್ಟ ವಿಸ್ಮಯಕರ ವಿಷಯಗಳೂ ಒಂದೆರಡಲ್ಲ; ಮುದ್ದಿನ ಸಾಕುಪ್ರಾಣಿಗಳೊಂದಿಗೆ ಆಟ ಖುಷಿಕೊಟ್ಟರೆ, ಟಾರೋಮೇಷಿಯ ಗೂಳಿ ಕಾಳಗ ನೆತ್ತರನ್ನು ಹೆಪ್ಪುಗಟ್ಟಿಸುವಷ್ಟು ಭಯಾನಕವಾದದ್ದು. ವಿವಿಧ ವಿಸ್ಮಯಗಳ ಓದು ರೋಮಾಂಚನ ನೀಡುತ್ತದೆ. ಅದ್ಭುತ ವಿಷಯಗಳ ಮೇಲ್ಪದರವನ್ನಷ್ಟೇ ನೋಡದೆ ಅಣು, ಪರಮಾಣು ಹಂತದಾಳಕ್ಕಿಳಿದು ವಿದ್ಯಮಾನಗಳನ್ನು ನಿರೂಪಿಸಲಾಗಿದೆ. ರಮ್ಯಾದ್ಭುತ-ಮೈನವಿರೇಳಿಸುವ ಕಥೆಗಳಲ್ಲಿ ಹಲವಾರು.
Author
Dr N S Leela
Binding
Soft Bound
ISBN-13
9788184674491
Number of Pages
84
Publication Year
2014
Publisher
Nava Karnataka Publications Pvt Ltd
Height
1 CMS
Length
22 CMS
Weight
100 GMS
Width
14 CMS
Language
Kannada