Quantity
Product Description
ಕಲಿಕೆಯೇ ಬದುಕು!
ಬದುಕು ಎಂಬುದು ಪರರ ಮೆಚ್ಚುಗೆಗಾಗಿ ನಡೆಸುವ ಆಟದ ಪ್ರದರ್ಶನವಲ್ಲ; ಅದು ಆತ್ಮತೃಪ್ತಿಯ ನಿರಂತರ ಹುಡುಕಾಟ. ನಾನು ಓದುವ ಪುಟಗಳು, ಬರೆಯುವ ಸಾಲುಗಳು, ಅಡುಗೆ ಮಾಡೋದು, ವಾರಕ್ಕೊಮ್ಮೆ ನೋಡುವ ಸಿನೆಮಾ-ನಾಟಕ ಅಥವಾ ತಿಂಗಳ ಪ್ರವಾಸ-ಇವೆಲ್ಲವೂ ನನ್ನ ವ್ಯಕ್ತಿತ್ವದ ಭಾಗಗಳು. ವ್ಯಕ್ತಿತ್ವ ವಿಕಸನ ಎ೦ಬುದು ರಾತ್ರೋರಾತ್ರಿ ಸ೦ಭವಿಸುವ ಪವಾಡವಲ್ಲ, ಅದೊ೦ದು 'ಮ್ಯಾರಥಾನ್'. ಮೊದಲ ದಿನದ ಅಡುಗೆ ರುಚಿಸದಿರಬಹುದು, ಮೊದಲ ಸಾಲುಗಳು ಅಪೂರ್ಣವಿರಬಹುದು. ಆದರೆ, ಸೋಲದೆ ಸಾಗುವ ಹಠವೇ ನಮ್ಮನ್ನು ನಿಪುಣರನ್ನಾಗಿಸುತ್ತದೆ.
ಈ ಪುಸ್ತಕ ಹೊರಗಿನ ಜಗತ್ತನ್ನು ಗೆಲ್ಲುವ ಮಂತ್ರಗಳನ್ನು ಹೇಳಿಕೊಡುವುದಿಲ್ಲ; ಬದಲಾಗಿ, ನಮ್ಮನ್ನು ನಾವು ದಿನದಿಂದ ದಿನಕ್ಕೆ ಉತ್ತಮಗೊಳಿಸಿಕೊಳ್ಳುವ ನಮ್ಮೊಳಗಿನ ಹಾದಿಯನ್ನು ತೋರಿಸುತ್ತದೆ. ಅ೦ತರ೦ಗದ ಮೌನಕ್ಕೆ ಧ್ವನಿಯಾಗುವ, ಅಭ್ಯಾಸದ ಬಲದಿಂದ ಬದುಕನ್ನು ಹಸನುಗೊಳಿಸುವ ನನ್ನ ಈ ಅನುಭವದ ಅಕ್ಷರಗಳು ನಿಮ್ಮ ಬದುಕಿಗೂ ಬೆಳಕಾಗಲಿ.
ನಿರ೦ತರ ಅಭ್ಯಾಸವೇ ಸಿದ್ಧಿ, ಅತ್ಮತೃಪ್ತಿಯೇ ಪರಮ ಸುಖ.
Binding
Soft Bound
Author
Anantha Kunigal
ISBN-13
9789357176507
Number of Pages
140
Publisher
Avva Pustakalaya
Publication Year
2026
Height
1 CMS
Length
22 CMS
Weight
100 GMS
Width
14 CMS
Language
Kannada