Product Description
ಜೀವನದಲ್ಲಿ ಯಶಸ್ವಿಯಾಗಬೇಕು ಎಂದು ಎಲ್ಲರೂ ಹಂಬಲಿಸುತ್ತಾರೆ. ಯಶಸ್ಸಿನ ಬೆನ್ನು ಹತ್ತುತ್ತಾರೆ. ಇದು ಮನುಷ್ಯ ಸಹಜ ಹಂಬಲ. ಆದರೆ ಯಶಸ್ಸು ಯಾರದೇ ಅನುಗ್ರಹದಿಂದ ಪುಕ್ಕಟೆ ದೊರಕುವಂಥದಲ್ಲ. ಜೀವನದಲ್ಲಿ ತಾನು ಸಾಧಿಸಬೇಕಾದ ಗುರಿ ಯಾವುದು? ಈ ಗುರಿ ತಲಪಲು ಯಾವ ಮಾರ್ಗ ಅನುಸರಿಸಬೇಕು ಎಂಬುದನ್ನು, ಈ ಮಾರ್ಗದಲ್ಲಿ ಎದುರಾಗುವ ಸಮಸ್ಯೆಗಳನ್ನು ಹೇಗೆ ಬಗೆಹರಿಸಬಹುದು ಎಂಬುದನ್ನು ತಿಳಿದುಕೊಳ್ಳುವುದು ಸಹ ಅಷ್ಟೇ ಮಹತ್ವದ್ದಾಗಿದೆ. ಮೊದಲಿಗೆ ಬೇಕಾದ್ದು ಆತ್ಮವಿಶ್ವಾಸ. ಆನಂತರ ಗುರಿ ಸಾಧನೆಯ ಮಾರ್ಗದಲ್ಲಿ ಅನುಸರಿಸಬೇಕಾದ ನಿಯಮಗಳು. ಸೋಲಾದಾಗ ಕೈಚೆಲ್ಲಿ ಕುಳಿತುಬಿಡದೆ ಮತೆ ಮತ್ತೆ ಪ್ರಯತ್ನಿಸಿ ಯಶಸ್ಸಿನ ಮಾರ್ಗ ಸುಗಮಗೊಳಿಸಿಕೊಳ್ಳುವ ಜಿಗುಟುತನ, ಮುಂತಾದ ಯಶಸ್ವೀ ಜೀವನದ ಒಂದು ನೀಲಿನಕ್ಷೆಯನ್ನು ಈ ಕೃತಿಯಲ್ಲಿ ವಿವರಿಸಲಾಗಿದೆ.