Product Description
ಶಿಕ್ಷಣ ಜ್ಞಾನದ ಮೂಲ. ವ್ಯಕ್ತಿತ್ವ ವಿಕಸನದಲ್ಲಿ ಅದರ ಪಾತ್ರ ಮಹತ್ವದ್ದು. ಆದರೆ ‘ಆಧುನಿಕ ಶಿಕ್ಷಣದ’ ಹೆಸರಿನಲ್ಲಿ ನಾಯಿ ಕೊಡೆಗಳಂತೆ ಹುಟ್ಟಿಕೊಂಡಿರುವ ಶಿಕ್ಷಣ ಸಂಸ್ಥೆಗಳು ಬರೀ ಹಣ ದಾಹವೊಂದನ್ನೇ ತಮ್ಮ ಗುರಿಯಾಗಿಸಿಕೊಂಡು ‘ಶಿಕ್ಷಣ’ದ ನಿಜವಾದ ಮೌಲ್ಯವನ್ನು ಕಡೆಗಣಿಸಿವೆ. ಹಾಗೆಯೇ ‘ಮನೆ’ ಅನ್ನುವುದು ಮಗುವಿಗೆ ಇಂದು ‘ಮನೆ’ಯಾಗಿ ಉಳಿದಿಲ್ಲ. ಒತ್ತಡದ, ಭೀತಿಯ, ಬಿಡುವಿಲ್ಲದ ಹೋಂವರ್ಕ್ ಮಾಡುವ ಗೂಡಾಗಿದೆ. ಶಾಲೆಯಿಂದ ಮನೆಗೆ ಬಂದ ಮಗುವಿಗೆ ಅಲ್ಲಿ ನಿಜವಾಗಿ ಹೆತ್ತವರ, ಬಂಧುಗಳ ಪ್ರೀತಿ ಸಿಗಬೇಕು. ಹಾಗಾಗದಿರುವುದೇ ಇಂದಿನ ಬಹುದೊಡ್ಡ ದುರಂತ. ಈ ನಿಟ್ಟಿನಲ್ಲಿ ಶಿಕ್ಷಕರು ಮತ್ತು ಹೆತ್ತವರು ಇಬ್ಬರೂ ಸೋಲುತ್ತಿದ್ದಾರೆ. ಜೊತೆಗೆ ಮಗುವೂ ಸೋಲುತ್ತಿದೆ. ಇದಕ್ಕೆ ಮಗುವೊಂದನ್ನೇ ಬೊಟ್ಟು ಮಾಡಿ ತೋರಿಸುವುದು ಅದರಲ್ಲಿ ಮತ್ತಷ್ಟು ಕೀಳರಿಮೆ ತುಂಬಲು ಸಹಾಯವಾಗುತ್ತದೆಯಷ್ಟೆ. ಕಲಿಯುವ, ಪರಸ್ಪರ ಪ್ರೀತಿಸುವ, ಮಾನಸಿಕ ಒತ್ತಡದಿಂದ ಹೊರಗುಳಿಯುವ ವಾತಾವರಣವಿಲ್ಲದೆ ಮಗು ಏನನ್ನೂ ಕಲಿಯಲಾರದು. ಇದು ‘ಶಾಲೆ’ ಮತ್ತು ‘ಮನೆ’ ಎರಡಕ್ಕೂ ಅನ್ವಯವಾಗುತ್ತ್ದೆ. ಶಾಲೆಯಲ್ಲಿ ಮಕ್ಕಳ ಹಿಂದುಳಿಯುವಿಕೆಗೆ ಮಕ್ಕಳ, ಶಿಕ್ಷಕರ, ಹೆತ್ತವರ ಪಾತ್ರವೇನು ಎಂಬುದನ್ನು ಡಾ|| ಜಿ. ಪುರುಷೋತ್ತಮ ಇಲ್ಲಿ ಚರ್ಚಿಸಿದ್ದಾರೆ ಮತ್ತು ಅವುಗಳಿಗೆ ಪರಿಹಾರವನ್ನೂ ಹೇಳಿದ್ದಾರೆ.