Product Description
ಇಸ್ರೇಲ್ನಲ್ಲಿ ಕೃಷಿ ಅಚ್ಚರಿಗಳಿಗೆ ಕೊನೆ ಮೊದಲಿಲ್ಲ. ಕರ್ನಾಟಕದ ಶೇಕಡಾ ೧೦ರಷ್ಟು ವಿಸ್ತೀರ್ಣದ, ಶೇಕಡಾ ೧೦ಕ್ಕಿಂತ ಕಡಿಮೆ ಮಳೆ ಪಡೆಯುವ ಈ ದೇಶ ಇಡೀ ಜಗತ್ತಿಗೆ ಹೈಟೆಕ್ ಕೃಷಿ ಪಾಠಗಳನ್ನು ಹೇಳುತ್ತಿವೆ. ವರ್ಷಕ್ಕೆ ಹೆಚ್ಚೆಂದರೆ ೮೦ ಸೆಂಟಿಮೀಟರ್ ಮಳೆಯಾಗುವ ಇಲ್ಲಿ ಕಳೆದ ಮೂರು ದಶಕಗಳಲ್ಲಿ ಕೃಷಿ ಉತ್ಪಾದನೆ ಏಳು ಪಟ್ಟು ಹೆಚ್ಚಾಗಿದೆ. ಕೃಷಿಗೆ ಬಳಸುವ ಶೇ.೮೦ರಷ್ಟು ನೀರಿನ ಮೂಲ ಯಾವುದು ಗೊತ್ತೆ? ನಗರವಾಸಿಗಳು ಬಳಸಿ ಚೆಲ್ಲಿದ್ದು! ನೆಲದಾಳದ ಅಣೆಕಟ್ಟು ಅನ್ನಿ, ಹೂ-ಹಣ್ಣು, ತರಕಾರಿ, ಗಡ್ಡೆಗೆಣಸು ಉತ್ಪಾದನೆ ಅನ್ನಿ, ಸಾವಯವ ಕೃಷಿ ಅನ್ನಿ, ಹೈಡ್ರೊಪೊನಿಕ್ಸ್, ಏರೋಪೊನಿಕ್ಸ್ ಅನ್ನಿ, ಮೀನುಗಾರಿಕೆ ಅಥವಾ ಡೇರಿ ಅನ್ನಿ-ನಾವಿಲ್ಲಿ ಕಲಿಯಬೇಕಾದ ಅನೇಕ ಸಂಗತಿಗಳಿವೆ. ಹಾಲಿನ ಉತ್ಪಾದನೆಯಲ್ಲಿ ಜಗತ್ತಿನಲ್ಲಿ ಮೊದಲ ಸ್ಥಾನ ಇದರದ್ದು. ವರ್ಷ ಕಳೆದಂತೆಲ್ಲ ಇಲ್ಲಿ ಕೃಷಿಕರ ಸಂಖ್ಯೆ ಕಡಿಮೆಯಾಗುತ್ತಿದೆ, ನೀರಿನ ಬಳಕೆ ಕಡಿಮೆಯಾಗುತ್ತಿದೆ. ಆದರೆ ಕೃಷಿ ಉತ್ಪನ್ನ ಮಾತ್ರ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ! ಕುಲಾಂತರಿ ಬೆಳೆಗಳ ಹೇಳ ಹೆಸರಿಲ್ಲ ಇಲ್ಲಿ. ಅಂಥ ಚಮತ್ಕಾರವನ್ನು ಕಣ್ಣಾರೆ ನೋಡಿ ಬಂದ ಆಪ್ತ ವರದಿ ಇಲ್ಲಿದೆ. ನಾಳಿನ ಗ್ರಾಮಭಾರತದ ಬಗ್ಗೆ ಆಸಕ್ತರಿರುವ ರೈತರಿಗೆ, ಕೃಷಿ ಅಧಿಕಾರಿಗಳಿಗೆ, ವಿದ್ಯಾರ್ಥಿಗಳಿಗೆ, ಒಂದು ಸೂಚಿಪಟ ಇಲ್ಲಿದೆ.