Product Description
ಡಾ.ಅಂಬೇಡ್ಕರ್ ಅವರು ಬರೆದಿರುವ “ನನ್ನ ಜೀವನ” ಕೃತಿ ಇಲ್ಲಿಯವರೆಗೆ ಬಂದಿರುವ ಕೃತಿಗಳಿಗಿಂತ ತುಂಬ ವಾಸ್ತವಿಕ ಕಷ್ಟ-ನಷ್ಟದ ನೋವಿನ ಅಪಮಾನದ ಪ್ರಸಂಗಗಳಿಂದ ಕೂಡಿದೆ. ಬೇರೆ ಬೇರೆ ಭಾಷೆಯ ದೇಶದ ನಾಡಿನ ಪ್ರತಿಭಾವಂತರು ಬರೆದ ಜೀವನ ಕೃತಿಗಳು ಪತ್ರಿಕೆ ಪುಸ್ತಕಗಳಿಂದ ಅವರಿವರು ಹೇಳಿದ್ದು-ಕೇಳಿದ್ದು ವಿಷಯಗಳಿಂದ ಸಂಗತಿ ಸಂದರ್ಭಗಳಿಂದ ಬೆಳೆಸಿ ಬರೆದಿದ್ದರೆ, ಡಾ.ಅಂಬೇಡ್ಕರರ ತಮ್ಮ ಹುಟ್ಟು, ಬಾಲ್ಯ, ಯೌವ್ವನ, ಪ್ರೌಢಿಮೆ ಕಾಲದಲ್ಲಿ ರೂಬಾರೂಬ ಕಂಡ ಉಂಡ ಸಾಮಾನ್ಯ ಏಳು ಬೀಳಿನ ಗೋಳಿನ ಸಣ್ಣ ಸಣ್ಣ ಸ್ಥಳದಲ್ಲಿ ಜರುಗಿದ ಅನುಭವಿಸಿದ ಹೀನಾಯವಾಗಿ ಬಾಳಿದ ಬದುಕಿದ ಅದರ ಒಡಲಿನಿಂದಲೆ ಎದ್ದು ಕಗ್ಗತ್ತಲ ಖಂಡವನ್ನು ಪ್ರಚಂಡ ಸೂರ್ಯನಿಂದ ಬೆಳಗಿದ, ವಿಚಾರ ಆಚಾರ ಪ್ರಚಾರದಿಂದ ಜನಾಂದೋಲನ ಗೈದ ಕಾರ್ಯ ಇಲ್ಲಿ ಬಂದಿದೆ.