Quantity
Product Description
ಇಪ್ಪತ್ತು ವರ್ಷ ಹಲವು ಸಾಫ್ಟ್ವೇರ್ ಕಂಪೆನಿಗಳಲ್ಲಿ ಕೆಲಸ ಮಾಡಿ, ಒಳ್ಳೆಯ ಹುದ್ದೆಯಲ್ಲಿ ಇದ್ದ ನಾನು, ಕೆಲಸ ಬಿಟ್ಟು ಕೃಷಿ ಮಾಡುತ್ತೇನೆ ಎಂಬ ಹುಚ್ಚಿನ ಬೆನ್ನು ಹತ್ತಿದಾಗ ಹುಬ್ಬೇರಿದಸಿದವರೆಷ್ಟೋ, ಬೆನ್ನ ಹಿಂದೆ ನಕ್ಕವರೆಷ್ಟೋ.. ಕೃಷಿ ಬಾಳೆಹಣ್ಣು ಸುಲಿದಷ್ಟು ಸುಲಭವಲ್ಲ ಅಂತ ಕ್ರಮೇಣ ಅರ್ಥವಾಗತೊಡಗಿತು. ನನ್ನ ಪಯಣ ರೋಚಕವಾಗಿತ್ತು. ನನ್ನ ಅನುಭವಗಳ ಜೊತೆಗೆ ನಾನು ಕಲಿತ ಕೆಲವು ಹೊಸ ವಿಷಯಗಳನ್ನು ತಿಳಿಸುವ ಪ್ರಯತ್ನದ ಫಲವೆ ಈ ಪುಸ್ತಕ. ನಾನು ಮಾಡಿದ್ದು ದೊಡ್ಡ ಸಾಧನೆ ಅಂತ ಇಲ್ಲಿ ಹೇಳಿಲ್ಲ. ಎಷ್ಟೋ ಸಾಧಕರ ಮುಂದೆ ನಾನು ಮಾಡಿದ್ದು ಏನೂ ಅಲ್ಲ. ಕೃಷಿಯಲ್ಲಿ ಇರುವ ಕಷ್ಟ-ನಷ್ಟಗಳ ಬಗ್ಗೆಯೂ ಹೇಳಿ ಹೆದರಿಸುವ ಪುಸ್ತಕ ಕೂಡ ಇದಲ್ಲ. ನನ್ನ ಹಾಗೆಯೇ ಹೊಸದಾಗಿ ಕೃಷಿಗೆ ಧುಮುಕುವವರಿಗೆ ದಾರಿದೀಪ ಆದೀತು ಎಂಬ ಆಶಯ. ವ್ಯವಸಾಯದ ಬಗ್ಗೆ ಏನೂ ಅರಿಯದ ನಾನೇ ಕೆಲವು ಹೆಜ್ಜೆ ಮುಂದೆ ಬಂದಿರುವೆ ಅಂದರೆ ಯಾರು ಬೇಕಾದರೂ ಇದನ್ನು ಮಾಡಲು ಆದೀತು ಎಂಬ ಸಂದೇಶ ಕೊಡುವುದು ಈ ಪುಸ್ತಕದ ಮುಖ್ಯ ಉದ್ದೇಶ.
Author
Guruprasad Kurtakoti
Binding
Soft Bound
ISBN-13
9788195593927
Number of Pages
141
Publication Year
2024
Publisher
Parisha Madhyama, Bengaluru
Height
1 CMS
Length
22 CMS
Weight
100 GMS
Width
14 CMS
Language
Kannada