Product Description
೧೯೮೨ರಲ್ಲಿ ತಮ್ಮ ವೈಶಾಖ ಕಾದಂಬರಿಗಾಗಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಗಳಿಸಿಕೊಂಡ ಚದುರಂಗರು ವೈದ್ಯರಾಗ ಹೊರಟು ಸಾಹಿತ್ಯದತ್ತ ತಿರುಗಿದವರು. ಸ್ವಾತಂತ್ರ್ಯ ಸಂಗ್ರಾಮ, ಗಾಂಧೀ ವಿಚಾರಧಾರೆ, ಸಾಮ್ಯವಾದಿ ಚಿಂತನೆ ಮತ್ತು ಸಮಾಜವಾದಿ ಚಳವಳಿಗಳಿಂದ ಪ್ರಭಾವಿತರಾದ ಚದುರಂಗರು ಒಂದು ಕವಿತಾ ಸಂಕಲನ, ಆರು ಕಥಾ ಸಂಕಲನ, ಎರಡು ನಾಟಕಗಳು ಮತ್ತು ನಾಲ್ಕು ಕಾದಂಬರಿಗಳನ್ನು ರಚಿಸಿದ್ದು, ಪ್ರಮಾಣದ ದ್ಟೃಂದ ಕಡಿಮೆ ಎನ್ನಿಸಬಹುದಾದರೂ ಗುಣಾತ್ಮಕವಾದ ಹಾಗೂ ವೈಶಿಷ್ಟ್ಯ ಪೂರ್ಣವಾದ ಸಾಹಿತ್ಯ ಸ್ಟೃಂದ ಅವರು ಕನ್ನಡದ ಮಹತ್ವದ ಲೇಖಕರಲ್ಲಿ ಒಬ್ಬರಾಗಿದ್ದಾರೆ. ಚಿತ್ರರಂಗದಲ್ಲಿನ ಅವರ ಸಾಧನೆಯೂ ವಿಶೇಷ ಉಲ್ಲೇಖಕ್ಕೆ ಅರ್ಹವಾಗಿದೆ. ಚದುರಂಗರ ಕುರಿತ ಸಂಶೋಧನೆಗಾಗಿ ಪಿಎಚ್.ಡಿ ಪದವಿಪಡೆದ ಡಾ||ಎಂ.ಎಸ್. ವೇದಾ ಈ ಪುಸ್ತಕದ ಲೇಖಕರು.