Select Size
Quantity
Product Description
ಇಂಗ್ಲಿಷಿನಲ್ಲಿ 'The heaven as I saw'ಎಂಬ ಶಿರೋನಾಮೆಯಡಿಯಲ್ಲಿ ಡಾ. ರಂಜನ್ ಪೇಜಾವರ್ ಬರೆದ ಕಾದಂಬರಿಯನ್ನು 'ಸ್ವರ್ಗ ನಾ ಕಂಡಂತೆ' ಎಂಬುದಾಗಿ ಸತ್ಯಕಾಮ ಶರ್ಮಾರವರು ಕನ್ನಡಿಸಿದ್ದಾರೆ. ಕಾಲ್ಪನಿಕತೆಯ ಮುಸುಕಿನಿಂದ ಆವೃತವಾದ ಆದರೆ ನೈಜತೆಯೆಡೆಗೆ ಓದುಗರನ್ನು ಕೊಂಡೊಯ್ಯುವ ಕಾದಂಬರಿಯಿದು. ಸತ್ತು ಸ್ವರ್ಗ ಸೇರಿದಂತೆ ಕನಸು ಕಾಣುವ ಮಾಮೂಲಿ ವ್ಯಕ್ತಿಯ ಕುರಿತ ಕಾದಂಬರಿ ಇದಾಗಬಹುದಾಗಿತ್ತು. ಅಂತಲ್ಲದೆ ಹಲವು ಪಾತ್ರಗಳ ಸಾವು-ಬದುಕಿನ ಸತ್ಯಾಸತ್ಯತೆಗಳ ಜೊತೆ ತುಲನೆ ಮಾಡುವ, ಏನಾಗಿದ್ದರೇನಾಗಬಹುದಾಗಿತ್ತು ಎಂದು ಚರ್ಚೆ ಮಾಡುವ ಚಿಂತನಾತ್ಮಕ ಕಾದಂಬರಿಯಾಗಿ ಡಾ.ರಂಜನ್ 'ಸ್ವರ್ಗ ನಾ ಕಂಡಂತೆ'ಯನ್ನು ಕಡೆದಿದ್ದಾರೆ.
ಮೂಲತಃ ಡಾಕ್ಟರ್ ಆಗಿರುವ ರಂಜನ್ ಪೇಜಾವರ್ ತನ್ನ ಕಥಾನಾಯಕನ ಸಾವು - ಬದುಕು ಗಳಿಗೆ ವೈದ್ಯಕೀಯ ಶಾಸ್ತ್ರದ ಸಮರ್ಥನೆಗಳನ್ನಿತ್ತು, ಆತನನ್ನು ಗಂಧರ್ವನೊಂದಿಗೆ ಸ್ವರ್ಗದತ್ತ ಒಯ್ಯುತ್ತಾರೆ. ಬಳಿಕ ಭೂಮಿಯಲ್ಲಿ 'ಸ್ವಕಾಯ ಪ್ರವೇಶ' ಮಾಡಿಸುತ್ತಾರೆ. ಸ್ವರ್ಗಲೋಕವನ್ನು ಕಂಡು ಬಂದ ಕಥಾನಾಯಕ ಭುವಿಯಲ್ಲಿ ತನ್ನ ಮುಂದಿನ ಬದುಕನ್ನು ಹೇಗೆ ನಿಭಾಯಿಸಬಲ್ಲ? ಆತ ತನ್ನ ಕಣ್ಣೆದುರಿಗಿರುವ ಮಂದಿಯನ್ನು ಸ್ವರ್ಗಕ್ಕಾಗಿ ಹೇಗೆ ತಯಾರು ಮಾಡಬಲ್ಲ? ಹಾಗೆ ತಯಾರಿ ಮಾಡುವ ಸಂದರ್ಭವನ್ನು ಲೋಕ ಒಪ್ಪಿತೆ? ಕಥಾನಾಯಕ ಹುಚ್ಚನಾದಾನೆ? ಇತ್ಯಾದಿ ಚರ್ಚೆಗಳನ್ನು -ವೈಜ್ಞಾನಿಕ ದೃಷ್ಟಿಕೋನವನ್ನೂ ಒಳಗೊಂಡಂತೆ-ಡಾ. ರಂಜನ್ ಪೇಜಾವರ್ ನಿಕಷಕ್ಕೊಡ್ಡಿದ್ದಾರೆ. ಕಥಾನಾಯಕನ ಮೊಮ್ಮಗ ಗುಡ್ಡುವಿನ ಬದುಕಿನಲ್ಲಿ ಇದು ಕಾಲ್ಪನಿಕ ಕತೆಯಾಗಿ ನಿಲ್ಲುವುದೋ ಅಥವಾ ಅಜ್ಜನ 'ನಿಜದ(?) ಅನುಭವ' ತನ್ನದೂ ಆಗುವುದೋ ಎಂಬುದನ್ನು ಕಾದಂಬರಿ ಓದಿದ ಬಳಿಕ ಚರ್ಚೆಮಾಡೋಣ.
ಸತ್ಯಕಾಮ ಶರ್ಮಾರವರು ಮೂಲ ಕಾದಂಬರಿಯ ಮರ್ಮವನ್ನು ಕೈಸೆರೆ ಹಿಡಿದು ಶಕ್ತವಾಗಿಯೇ ಬಿಡುಗಡೆಗೊಳಿಸಿದ್ದಾರೆ. ಕನ್ನಡ ಕಾದಂಬರಿ ಲೋಕಕ್ಕೆ 'ಸ್ವರ್ಗ ನಾ ಕಂಡಂತೆ'ಯು ಒಂದು ವಿನೂತನ ಪ್ರಯೋಗ.
-ಡಾ. ನಾ.ದಾಮೋದರ ಶೆಟ್ಟಿ (ಬೆಂಗಳೂರು)
'ಸತ್ತವರು ಸ್ವರ್ಗಕ್ಕೆ/ನರಕಕ್ಕೆ ಹೋಗುತ್ತಾರೋ 'ಇಲ್ಲವೋ?' ಈ ಮಾತು ಅತ್ತಾಗಿರಲಿ-'ಸ್ವರ್ಗ ನಾ ಕಂಡಂತೆ' ಕಾದಂಬರಿಯನ್ನು ಓದಿದವರಿಗೆ; ಆತ್ಮಾವಲೋಕನ, ಈ ಪಾಪ ಪುಣ್ಯದ ಕುರಿತು ಚಿಂತನ ಮಂಥನ, ಒಳಿತು ಕೆಡುಕಿನ ಪರಾಮರ್ಶೆ ಇದಾವುದೂ ತಪ್ಪಿದ್ದಲ್ಲ. ಕೆಲ ಕಾಲ ಮರಣಿಸಿ ಮರು ಜೀವ ಪಡೆವ ವಕೀಲ ರಾಜಶೇಖರ್, ಆ ಸಮಯದಲ್ಲಿ ಸ್ವರ್ಗಕ್ಕೆ ಹೋಗಿ ಅಲ್ಲಿ ಭೇಟಿಯಾಗುವ, ಭೇಟಿಯಾಗದ ವಿವಿಧ ಪಾತ್ರಗಳ ಕಥಾನಕ - ಡಾ ರಂಜನ್ ಪೇಜಾವರ್ ಅವರ ಅಪರೂಪದ ಕಾದಂಬರಿ 'ದ ಹೆವೆನ್ ಆಸ್ ಐ ಸಾ'. ಹಾಗೆಂದು ಇದು ಪ್ರವಚನವಲ್ಲ, ಧರ್ಮಬೋಧನೆ ಅಲ್ಲ. ಸರಳವಾಗಿ ಓದಿಸಿಕೊಂಡು ಹೋಗುವ ಕಾದಂಬರಿ. ಓದುವ ಖುಷಿ, ಬುದ್ದಿಗೆ ಗ್ರಾಸ ಒದಗಿಸುವ ಈ ವಿಶಿಷ್ಟ ಕೃತಿಯನ್ನು ಕನ್ನಡಕ್ಕೆ ಅಷ್ಟೇ ಸೊಗಸಾಗಿ ತಂದ ಸತ್ಯಕಾಮ ಶರ್ಮಾರಿಗೆ ಹ್ಯಾಟ್ಸ್ ಆಫ್!
-ಗಣೇಶನ್ ಕೆ (ನಿವೃತ್ತ ಹೆಚ್ಚುವರಿ ಕಾರ್ಯದರ್ಶಿ ಕೇರಳ ಲೋಕಸೇವಾ ಆಯೋಗ)
Binding
Soft Bound
Author
Sathyakama Sharma Kasaragodu
ISBN-13
9788198210852
Number of Pages
176
Publisher
Sneha Book House
Publication Year
2024
Length
22 CMS
Weight
300 GMS
Language
Kannada