Quantity
Product Description
`ರೆಕ್ಕೆಯಿಲ್ಲದ ಹಕ್ಕಿ' ಕೃತಿಯನ್ನು ಅಗ್ರಹಾರ ಕೃಷ್ಣಮೂರ್ತಿ ಅವರು ಕನ್ನಡಕ್ಕೆ ಅನುವಾದಿಸಿದ್ದು, 2024ರ ಕುವೆಂಪು ರಾಷ್ಟ್ರೀಯ ಪುರಸ್ಕಾರ ಪಡೆದ ಗುಜರಾತಿ ಲೇಖಕಿ ಹಿಮಾಂಶಿ ಇಂದುಲಾಲ್ ಶೆಲತ್ ಅವರ ಆಯ್ದ ಕಥೆಗಳ ಮೂಲ ಸಂಕಲನ ಇದಾಗಿದೆ. ಕೃತಿಯ ಬಗ್ಗೆ ರಶ್ಮಿ ತೆಂಡೂಲ್ಕರ್ ಹೀಗೆ ಹೇಳುತ್ತಾರೆ; ಮದುವೆಯಾದ ಹೆಂಗಸಿಗೆ ಬರುವ ಒಂದು ಪ್ರೇಮ ಪತ್ರದ ಕತೆ. ಆಕೆಗೆ ಪತ್ರ ಬರೆದಿದ್ದು ಯಾರೋ ಅಪರಿಚಿತ. ಆ ಪ್ರೇಮ ಪತ್ರ ಆಕೆಗೆ ಖುಷಿ ಕೊಡುತ್ತದೆ. ಒಂದು ಸಂಗೀತ ಕಚೇರಿಗೆ ಬಾ ಎಂದು ಕರೆದಾಗ ಆ ಅಪರಿಚಿತನನ್ನು ನೋಡ್ಬೇಕು ಅಂತ ಅವಳು ಹೊರಡುತ್ತಾಳೆ. ಅಲ್ಲಿ ಅವನಿಗಾಗಿ ಹುಡುಕುತ್ತಾಳೆ. ಅವ ಯಾರು ಅಂತ ಕೊನೆಗೂ ಅವಳಿಗೆ ಗೊತ್ತಾಗಲ್ಲ. ಆದ್ರೆ ಈ ಪತ್ರ ಬರೆದ ವ್ಯಕ್ತಿ ಆಕೆಯನ್ನು ನೋಡ್ತಾನೆ. 'ವಾವ್, ಹೆಂಗಸರೆಂದರೆ ಹೀಗೆ! ನೆಲೆಯೂರಿ ನಿಂತ ಸ್ತ್ರೀಯೊಬ್ಬಳು ಪ್ರೀತಿಯ ಇಂಥ ಗಾಳಿ ಮಾತನ್ನು ಇಷ್ಟು ಸುಲಭವಾಗಿ ನಂಬುತ್ತಾಳೆ. ಯಾರಿಗೆ ಬೇಕಾದರೂ ಪ್ರೇಮ ಪತ್ರಗಳನ್ನು ಬರೆಯುತ್ತಾ ಎಲ್ಲ ಕಡೆ ತಿರುಗಾಡುವುದು ಎಷ್ಟು ಸುಲಭವಾದ ಕೆಲಸ.. ಎಂಥಾ ಅದ್ಭುತ!' ಅಂತಾನೆ ಕತೆ ಅಲ್ಲಿಗೆ ಮುಗಿಯುತ್ತೆ. ಓದಿದ ನಂತರ ಈ ಕತೆಯ ಹೆಣ್ಣು ಕಾಡುತ್ತಾಳೆ
Length
22 CMS
Weight
100 GMS
Width
14 CMS
Height
1 CMS
Number of Pages
60
Publisher
Aharnishi Prakaashana
Publication Year
2025
Author
Agrahara Krishnamurthy
Binding
Soft Bound
Language
Kannada