ಬದುಕಿನಲ್ಲಿ ನಮಗೆ ಎದುರಾಗುವ ಅನೇಕ ನಕಾರಾತ್ಮಕ ಸಂಗತಿಗಳು ಸನ್ನಿವೇಶಗಳಿಂದ ಕೆಲವು, ಸ್ವಯಂಕೃತದಿಂದ ಮತ್ತೆ ಹಲವು ಉಂಟಾಗುತ್ತವೆ.
ಇಂತಹ ಮೈನಸ್ ಅಥವಾ ದೌರ್ಬಲ್ಯ ಅಂಶಗಳನ್ನು ಬದುಕಿನಿಂದ ಅಳಿಸಿ, ಅಲ್ಲಿ ಪ್ಲಸ್ ಅಥವಾ ಶಕ್ತಿಯುತ ಅಂಶಗಳನ್ನು ಬಳಸಿದರೆ ಜಯ ನಿಶ್ಚಯ.
ನಮ್ಮಲ್ಲಿ ಅಡಗಿರುವ ಅನೇಕ ನಕಾರಾತ್ಮಕ ಅಂಶಗಳನ್ನು ಹುಡುಕಿ ಹೊರಹಾಕಿದರೆ ಜೀವನದಲ್ಲಿ ಗೆಲುವು ಖಂಡಿತ.
ಈ ಹೊತ್ತಗೆ ಓದಿದಾಗ, ಅಬ್ಬಾ! ಇಷ್ಟೊಂದು ನೆಗೆಟಿವ್ ಪಾಯಿಂಟುಗಳು ನಮ್ಮೊಳಗೆ ಇವೆಯಾ ಎನಿಸುತ್ತದೆ. ನಮ್ಮಲ್ಲಿನ ಪಾಜ್ಹಿಟಿವ್ ಪಾಯಿಂಟುಗಳನ್ನು ಹೊರತಂದು ಗೆಲ್ಲಬಹುದು.