Quantity
Product Description
ಖರ್ಚು ಎನ್ನುವುದು ಮನಸ್ಥಿತಿ. ಇದರ ಹಿಂದಿನ ಸೈಕಾಲಜಿ ನಾವೆಷ್ಟೇ ಹೇಳಿದರೂ ಅದು ಕಡಿಮೆ. ಏಕೆಂದರೆ ಖರ್ಚಿನ ಪ್ಯಾಟ್ರನ್ ನಾವು ಕಂಡು ಕೊಂಡಿದ್ದೇವೆ ಎಂದು ಹೇಳಲು ಸಾಧ್ಯವಿಲ್ಲ. ಸಾವಿರ ದಾರಿ ಹೇಳಿದರೂ ಇನ್ನೊಂದು ಹೊಸ ದಾರಿ ಹುಟ್ಟಿರುತ್ತದೆ. ಆದರೆ ಮನಶ್ಶಾಸ್ತ್ರದ ಅಂಶಗಳನ್ನು ನಾವು ನಿಖರವಾಗಿ ಹೇಳಬಹುದು. ಎಲ್ಲಾ ರೀತಿಯ ಖರ್ಚಿನ ದಾರಿಯೂ ಈ ಮನಸ್ಸಿನ ಮೂಲಕವೇ ಹಾದು ಹೋಗಬೇಕು. ಹೀಗಾಗಿ ಖರ್ಚಿನ ಹಿಂದಿನ ಒಂದಷ್ಟು ಮನಶ್ಶಾಸ್ತ್ರ ತಿಳಿಯುವ ಪ್ರಯತ್ನವನ್ನು ಮಾಡೋಣ. ನೆನಪಿರಲಿ ಈ ಪುಸ್ತಕ ನಿಮಗೆ ಖರ್ಚು ಕಡಿಮೆ ಮಾಡಿ ಅಥವಾ ಹೆಚ್ಚು ಮಾಡಿ ಎಂದು ಉಪದೇಶ ನೀಡುವ ಪುಸ್ತಕವಲ್ಲ! ಸ್ಮಾರ್ಟ್ ಸ್ಪೆಂಡಿಂಗ್, ಬುದ್ಧಿವಂತಿಕೆಯಿಂದ ಖರ್ಚು ಮಾಡುವುದು ಹೇಗೆ? ಎನ್ನುವುದನ್ನು ತಿಳಿಸುವ ಪ್ರಯತ್ನವಷ್ಟೇ. ಖರ್ಚು ಎನ್ನುವುದು ಬದುಕಿನ ಮೂಲ ಉದ್ದೇಶಕ್ಕೆ ಪೂರಕವಾಗಿರಬೇಕು. ಮಿಕ್ಕೆಲ್ಲವೂ ಇವತ್ತಿನ ಗದ್ದಲದಲ್ಲಿ ಸೃಷ್ಟಿಯಾಗಿರುವ ಕಸ ಎನ್ನುವುದನ್ನು ನಾವು ಮರೆಯಬಾರದು.
ನೀವು ಒಂದು ಹೋಟೆಲ್ಗೆ ಹೋಗಿ 500 ರೂಪಾಯಿ ಖರ್ಚು ಮಾಡಿ ಊಟ ಮಾಡುತ್ತೀರಿ ಎಂದು ಇಟ್ಟುಕೊಳ್ಳಿ. ಆ 500 ರೂಪಾಯಿ ಹೋಟೆಲ್ ಮಾಲಿಕನಿಗೆ ಸಿಗುತ್ತದೆ. ಅವನು ಅದರಲ್ಲಿ ತರಕಾರಿ ಮಾರುವವನಿಗೆ, ಹಾಲಿನವನಿಗೆ ಮತ್ತು ತನ್ನ ಹೋಟೆಲ್ ಕೆಲಸಗಾರರಿಗೆ ಸಂಬಳ ನೀಡುತ್ತಾನೆ. ಆ ಕೆಲಸಗಾರರು ಆ ಹಣವನ್ನು ತಮಗಾಗಿ ಬಟ್ಟೆ, ಔಷಧಿ ಅಥವಾ ಮಕ್ಕಳ ಶಿಕ್ಷಣಕ್ಕೆ ಖರ್ಚು ಮಾಡುತ್ತಾರೆ. ಅಂದರೆ, ನೀವು ಖರ್ಚು ಮಾಡಿದ ಒಂದೇ ಒಂದು 500 ರೂಪಾಯಿ ನೋಟು ಹತ್ತಾರು ಜನರ ಕೈ ದಾಟಿ, ಎಲ್ಲರ ಹೊಟ್ಟೆ ತುಂಬಿಸಲು ಕಾರಣವಾಗುತ್ತದೆ. ಇದನ್ನು ಆರ್ಥಿಕತೆಯಲ್ಲಿ `ಮಲ್ಟಿಪ್ಲೈಯರ್ ಎಫೆಕ್ಟ್' (Multiplier Effect) ಎನ್ನುತ್ತಾರೆ. ನಾವು ಖರ್ಚು ಮಾಡಿದ ಒಂದು ರೂಪಾಯಿ ಅದರ ಅವಶ್ಯಕತೆ ಇರುವ ಬೇರೆ ಯಾರನ್ನೋ ತಲುಪುತ್ತದೆ. ಈ ರೀತಿ ಚಲಾವಣೆ ಆಗುತ್ತಾ ಇದ್ದಾಗ ಅದರ ಮೌಲ್ಯ ವೃದ್ಧಿ ಆಗುತ್ತಾ ಸಾಗುತ್ತದೆ. ಎಲ್ಲರ ಬದುಕಿಗೆ ದಾರಿಯೂ ಆಗುತ್ತದೆ.
Publication Year
2026
Publisher
Sawanna Enterprises
Number of Pages
164
ISBN-13
9788168955769
Author
Rangaswamy Mookanahalli
Binding
Soft Bound
Language
Kannada
Width
14 CMS
Weight
200 GMS
Length
22 CMS
Height
2 CMS