Select Size
Quantity
Product Description
ಜಿಪುಣತನ ಮಾನವ ಸಂಸ್ಕೃತಿಯಲ್ಲಿರುವ ಒಂದು ವರ್ತನೆ. ಅದರ ಬಗೆಗೆ ಪುರಾತನ ಕಾಲದಿಂದ ಅನೇಕ ಕಥೆಗಳಿವೆ. ಇಂತಹ ಕೆಲ ಕಥೆಗಳನ್ನು ಸಂಗ್ರಹಿಸಿ ಈ ಪುಸ್ತಕದಲ್ಲಿ ಪ್ರಕಟಿಸುತ್ತಿದ್ದೇವೆ. ಸಾಧ್ಯವಿದ್ದಾಗ ಮೂಲ ಆಕರದ ಉಲ್ಲೇಖ ಮಾಡಿದ್ದೇವೆ. ಆದರೆ ಅನೇಕ ಕಥೆಗಳು ಅಲ್ಲಲ್ಲಿ ಕೇಳಿದಂಥವು ಆದುದರಿಂದ ಅವುಗಳ ಸೆಲೆಯ ಮೂಲ ಗೊತ್ತಾಗುವದು ಸಾಧ್ಯವಿಲ್ಲ. ಆದರೆ ಕಥೆ ಯಾವುದೇ ಮೂಲದಿಂದ ಬಂದಿರಲಿ, ಜಿಪುಣತನ ಅಥವಾ ಸಂಕೋಚವಿಲ್ಲದೆ ಸ್ವಾಗತಿಸಿದ್ದೇವೆ. ಸ್ವಂತ ರಚನೆಯ ಕೆಲ ಕಥೆಗಳನ್ನೂ ಸೇರಿಸಿದ್ದೇವೆ.
ಜಿಪುಣ ಅಂದಾಕ್ಷಣ ನಮ್ಮಲ್ಲಿ ಬರುವ ಭಾವನೆಗಳು ನಕಾರಾತ್ಮಕವಾದವುಗಳು. ಜಿಪುಣನೆಂದರೆ ಬಹಳ ಸ್ವಾರ್ಥಿಯಾದ, ತನ್ನಷ್ಟಕ್ಕೆ ಇರುವ ಒಬ್ಬ ವೃದ್ಧನ ಕಲ್ಪನೆ ಮಾಡಿಕೊಳ್ಳುತ್ತೇವೆ ಮತ್ತು ಕಥೆ ಇತ್ಯಾದಿಗಳ ಮೂಲಕ ಅವನನ್ನು ಹಾಸ್ಯಮಾಡುತ್ತೇವೆ. ಇಂತಹ ಕಥೆಗಳಲ್ಲಿ ಅವನಾಡುವ ಆಟಗಳು ಅವನು ಇಚ್ಛಿಸಿದಂತೆ ಅಥವಾ ತಿಳಿದಂತೆ ಜಾಣ ದಾರಿಯಲ್ಲಿ ಸಾಗದೆ ಅವನ ಮೂರ್ಖತನವನ್ನೇ ಪ್ರದರ್ಶಿಸುತ್ತವೆ. ಇಂತಹ ವರ್ತನೆಗಳನ್ನು ಟೀಕಿಸಲು ಅನೇಕ ಶಬ್ದಗಳಿವೆ: ಜಿಪುಣ, ಲೋಭಿ, ಜೀನ, ಜೀನಹಂಕ, ಜೀನಗೊಟ್ಟ, ನೆಲಕಲ, ಜಿಪುಣಾಗ್ರೇಸರ, ಕೃಪಣ, ಲುಬ್ಧ, ಲುಬ್ಧಕ, ಕಂಜೂಸ್, ಜಿಬುಟ, ಜುಗ್ಗ, ಆಯಕಟ್ಟುಗಾರ ಇತ್ಯಾದಿ. ಬಳಕೆಯಲ್ಲಿರುವ ಅನೇಕ ಗಾದೆಯ ಮಾತುಗಳು ಸಹ ಇಂತಹ ಭಾವನೆಗಳನ್ನು ಪುಷ್ಟೀಕರಿಸುತ್ತವೆ: “ಜೀನನ ಬಾಳು ನುಸಿ ನುಂಗಿತಂತೆ; ಜೀನ ಗಳಿಸಿದ, ಜಾಣ ಉಂಡ; ಕೊಟ್ಟರೆ ಕರ್ಣ, ಕೊಡದಿದ್ದರೆ ಜೀನ; ಕಂಡವರ ಮನೇಲಿ ನೋಡು ನನ್ನ ಧಾರಾಳಿತನವ; ಅಕ್ಕಿ ಮೇಲೆ ಆಸೆ, ನೆಂಟರ ಮೇಲೆ ಪ್ರೀತಿ; ಮನೆಗೆ ಹೋದರೆ ಮಜ್ಜಿಗೆ ಕೊಡದವಳು, ಕರೆದು ಹಾಲು ಕೊಡುತ್ತಾಳೆಯೇ?” ಇತ್ಯಾದಿ.
Author
Various Authors
Binding
Soft Bound
Number of Pages
152
Publication Year
2022
Publisher
Nava Karnataka Publications Pvt Ltd
Height
2 CMS
Length
22 CMS
Weight
200 GMS
Width
14 CMS
Language
Kannada