Product Description
ಭಾರತೀಯ ಸಂಸ್ಕೃತಿಯದು ಸುದೀರ್ಘ ಇತಿಹಾಸ. ಇಂಥ ಸಂಸ್ಕೃತಿ ನಿರ್ಮಾಣಕ್ಕೆ ಅಂದಂದಿನ ಸಮುದಾಯಗಳ ಕೊಡುಗೆ ಅನನ್ಯ. ಕಾಲಕಾಲಕ್ಕೆ ಪರಿಷ್ಕರಣೆಗೊಂಡು ಹಲವು ಏಳುಬೀಳುಗಳನ್ನು ದಾಟಿ ಬದಲಾಗುತ್ತಾ ಹೊರಳುದಾರಿಯಲ್ಲಿ ಸಾಗಿ ಇಂದಿನ ಸ್ಥಿತಿ ತಲುಪಿದೆ. ಭಾರತೀಯ ಸಮಾಜದ ಇತಿಹಾಸದ ಬೇರುಮೂಲಗಳನ್ನು ಶೋಧಿಸುತ್ತಾ ಹೋದಂತೆ ಜಗತ್ತಿಗೇ ಮಾದರಿಯಾಗುವಂಥ ಭವ್ಯ ಪರಂಪರೆಯೇನೋ ಅಲ್ಲಿದೆ. ಜೊತೆಗೆ ಸ್ವೀಕಾರಾರ್ಹವಲ್ಲದ ಅದೆಷ್ಟೋ ಸಂಗತಿಗಳಿರುವುದೂ ಸುಳ್ಳಲ್ಲ. ಅಪ್ರಿಯವಾದದ್ದೆಂದು ಸತ್ಯಗಳನ್ನು ಕೈಬಿಟ್ಟು ಬರೆಯಲ್ಪಟ್ಟಿದ್ದು ಎಂದಿಗೂ ಸಂಪೂರ್ಣ ಇತಿಹಾಸ ಆಗುವುದಿಲ್ಲ. ಇಂಥ ಸಂಗತಿಗಳ ಬೆನ್ನುಬಿದ್ದು ಹಲವು ಉತ್ಖನನಗಳ ದಾಖಲೆಗಳನ್ನು ಪರಿಶೀಲಿಸಿ, ವಿಮರ್ಶಿಸಿ ಬರೆಯಲಾದ ಈ ಬರಹಗಳು ನಮ್ಮ ಸಮಾಜದ ಮೇಲೆ ವಿಶ್ಲೇಷಣಾತ್ಮಕ ನೋಟ ಬೀರಿವೆ. ಮಾತ್ರವಲ್ಲ ಪ್ರಾಚೀನ ಭಾರತೀಯ ಸಮಾಜದ ಮೇಲೆ ಹೊಸ ಬೆಳಕೊಂದನ್ನು ಚೆಲ್ಲಿವೆ.