Select Size
Quantity
Product Description
ಲೋಹಿತ್ರ ಕಥೆಗಳಲ್ಲಿ ಎದ್ದು ಕಾಣುವ ಅಂಶವೆಂದರೆ, ಅವುಗಳ ದಟ್ಟವಾದ ತಾತ್ವಿಕತೆ, ಈ ಕಥೆಗಳ ಶೀರ್ಷಿಕೆಗಳಲ್ಲಿಯೇ ಇದರ ಸೂಚನೆಯಿರುವುದನ್ನು ಗಮನಿಸಬಹುದು, ವೈಯಕ್ತಿಕ, ಸಾಮಾಜಿಕ, ಧಾರ್ಮಿಕ ಹಕ್ಕು, ಹೊಣೆಗಾರಿಕೆಗಳು, ನ್ಯಾಯ-ಅನ್ಯಾಯಗಳ ಕಲ್ಲನೆ, ಲೈಂಗಿಕ ಸಂಬಂಧಗಳಂಥ ಮಾನವೀಯ ಸಂಬಂಧಗಳ ರಹಸ್ಯಮಯತೆ, ಸತ್ಯ-ಅಸತ್ಯಗಳ ಸಮಸ್ಯೆಗಳು ಇಂಥ ಮಹತ್ವದ ತಾತ್ವಿಕ ಕಾಳಜಿಗಳು ಅವರ ಕಥೆಗಳ ಹಿಂದಿನ ಪ್ರೇರಕ ಶಕ್ತಿಗಳಾಗಿವೆ. ಈ ಕಾಳಜಿಗಳೆಲ್ಲ ಅನುಭವದ ದೇಹಗಳಲ್ಲಿಯೇ ಆಕಾರಗೊಳ್ಳುವುದರಿಂದ ಅವರ ಕಥೆಗಳು ಜೀವಂತಿಕೆ ಪಡೆಯುತ್ತವೆ. ಕಥನದ ಹಲವಾರು ಪ್ರಕಾರಗಳನ್ನು ಲೋಹಿತ್ ಔಚಿತ್ಯಪೂರ್ಣವಾಗಿ ತಮ್ಮ ಕಥೆಗಳಲ್ಲಿ ಬಳಸಿಕೊಂಡಿದ್ದಾರೆ. ಲೋಹಿತ್ ಕಥೆಗಳ ಇನ್ನೊಂದು ವೈಶಿಷ್ಟ್ಯವೆಂದರೆ, ಅವುಗಳಲ್ಲಿ ಮೂಡಿಬಂದಿರುವ ಸಾಮಾಜಿಕ ಗತಿಶೀಲತೆ, ಅವರ ಬರವಣಿಗೆಯ ಸಂದರ್ಭ ತೀರ ಸಮಕಾಲೀನವಾದುದು. ಮೌಲ್ಯಗಳನ್ನು ಕುರಿತಂತೆ ಇಂದು ನಮ್ಮ ಸಮಾಜದಲ್ಲಿ ಕಂಡುಬರುವ ಅನಿಶ್ಚಿತತತೆ ಹಾಗೂ ಸಂದಿಗ್ಧಗಳು ಅವರ ಕಥೆಗಳ ತಾತ್ವಿಕತೆಯನ್ನು ತೀವ್ರವಾಗಿ ಪ್ರಭಾವಿಸಿವೆ. ಮೊದಮೊದಲು ಪಾಶ್ಚಾತ್ಯಸಂಸ್ಕೃತಿಯ ಸಂಪರ್ಕದಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿದ್ದ ಈ ಸಮಸ್ಯೆಗಳು ಜಾಗತೀಕರಣದ ಸದ್ಯದ ಸನ್ನಿವೇಶದಲ್ಲಿ ಅಂತರಿಕ ಸನ್ನಿವೇಶಗಳಲ್ಲಿಯೂ ಕಾಣಿಸಿಕೊಳ್ಳುತ್ತಿವೆ. ಲೋಹಿತ್ರ ಸಂವೇದನೆಯ ಮೂಲ ದೇಶೀಯ ಸಂಸ್ಕೃತಿಯಲ್ಲಿಯೇ ಇದ್ದರೂ, ಪಾಶ್ಚಾತ್ಯ ಸಂಸ್ಕೃತಿಯನ್ನು ಅದರ ನೆಲೆಯಲ್ಲಿಯೇ ಅನುಭವಿಸಿದುದರ ಪರಿಣಾಮವಾಗಿ ಅದಕ್ಕೆ ಮುಕ್ತತೆ ದೊರೆತಿದೆ.
- ಜಿ. ಎಸ್. ಅಮೂರ
Author
Dr Lohit Naikar
Binding
Soft Bound
ISBN-13
9789392192753
Number of Pages
176
Publication Year
2024
Publisher
Manohara Granthamaala
Height
1 CMS
Length
22 CMS
Weight
300 GMS
Language
Kannada