Product Description
ಪ್ರಖರ ವಿಚಾರವಾದಿಯಾಗಿದ್ದ ಡಾ. ಎಚ್ ನರಸಿಂಹಯ್ಯನವರು ಕಾಲದ ಸವಾಲುಗಳಿಗೆ ಮುಖಾಮುಖಿಯಾಗುವ ವ್ಯಕ್ತಿತ್ವ ಉಳ್ಳವರಾಗಿದ್ದರು. ಮೌಢ್ಯ ಮುಕ್ತ ಸಮಾಜ ಕಟ್ಟಲು ಜೀವನದುದ್ದಕ್ಕೂ ಶ್ರಮಿಸಿದ ಅವರು ಡಾ ಕವೂರ್ ಅವರ ಹಾದಿಯನ್ನು ಆಯ್ಕೆಮಾಡಿಕೊಂಡಿದ್ದರು. ಡಾ. ಎಚ್ಚೆನ್ ಎಂದೇ ಆಪ್ತವಲಯದಲ್ಲಿ ಪ್ರಖ್ಯಾತರಾದ ಪದ್ಮಭೂಷಣ ಡಾ. ಎಚ್. ನರಸಿಂಹಯ್ಯನವರು ಸಾರ್ಥಕ ಬದುಕು ಬಾಳಿ ಸಮಸ್ತ ಸಮಾಜದ ಏಳ್ಗೆಗೆ ಸದಾಕಾಲ ಚಿಂತಿಸಿದರು.
ಸಮಾಜಮುಖಿಗೊಳಿಸಿಕೊಂಡ ಬದುಕನ್ನು ಸಾಗಿಸಿದ ಅವರು ಸಮಾನತೆ, ವೈಜ್ಞಾನಿಕ ಮನೋಭಾವ, ಸೆಕ್ಯುಲರಿಸಂನಂತಹ ಭಾರತದ ಸಂವಿಧಾನಿಕ ಮೌಲ್ಯಗಳ ಪರವಾಗಿ ಧ್ವನಿ ಎತ್ತಿದಂತೆಯೇ ಮೌಢ್ಯಾಚರಣೆಗಳ ವಿರುದ್ಧ ಯಾವುದೇ ರಾಜಿಮಾಡಿಕೊಳ್ಳದೆ ಹೋರಾಡಿದವರು. ಮನುಷ್ಯನ ಸಣ್ಣತನವನ್ನು ಖಂಡಿಸಿದವರು; ಜೀವನ್ದ ಉದಾತ್ತ ಮೌಲ್ಯಗಳನ್ನು ಸದಾ ಎತ್ತಿ ಹಿಡಿಯುವ ಕಷ್ಟಸಾಧ್ಯ ಹಾದಿಯಲ್ಲಿ ದೃಢ ನಿಶ್ಚಯದಿಂದ ಜೀವನವನ್ನು ಸಾಗಿಸಿದವರು.
ಮೌಢ್ಯಾಚರಣೆಗಳನ್ನು ನಿಷೇಧಿಸುವ ಕಾಯ್ದೆ ಮಾಡುವಲ್ಲಿ ಸರಕಾರ ಮೀನಮೇಷ ಎಣಿಸುತ್ತಿರುವ ಈ ಹೊತ್ತಿನಲ್ಲಿ ಅವರ ವಿಚಾರಧಾರೆಯನ್ನು ಇಂದಿನ ಮತ್ತು ಮುಂದಿನ ಪೀಳಿಗೆಗೆ ಪರಿಚಯಿಸಬೇಕೆಂಬ ಉದ್ದೇಶದಿಂದ ಈ ಕೃತಿ ರಚಿಸಲಾಗಿದೆ.