Select Size
Quantity
Product Description
ಹುಟ್ಟಿನಿಂದ ಸಾವಿನ ಕಡೆಗೆ ಪ್ರಯಾಣವೇ ಜೀವನ, ಒಂಟಿಯಾಗೇ ಈ ಜಗತ್ತಿಗೆ ಕಾಲಿಡುತ್ತೇವೆ. ಒಂಟಿಯಾಗಿಯೇ ಹೋಗುತ್ತೇವೆ, ಹುಟ್ಟುವಾಗ ಬರಿಗೈ, ಹೋಗುವಾಗಲೂ ಬರಿಗೈ
ಈ ಪ್ರಯಾಣದಲ್ಲಿ ತಂದೆ-ತಾಯಿ, ಅಜ್ಜ-ಅಜ್ಜಿ ಸೋದರ-ಸೋದರಿಯರು, ಜೀವನಸಂಗಾತಿ, ಮಕ್ಕಳು, ಬಂಧು-ಮಿತ್ರರು ಸ್ವಲ್ಪಕಾಲ ನಮ್ಮ ಜೊತೆ ಇರುತ್ತಾರೆ, ಈ ಪ್ರಯಾಣದಲ್ಲಿ ಅನೇಕ ನಿಲ್ದಾಣಗಳು. ಹರೆಯ, ಪ್ರೌಢ, ಮಧ್ಯವಯಸ್ಸು, ವೃದ್ಧಾಪ್ಯ ಕೊನೆಗೆ ಕೊನೆಯ ನಿಲ್ದಾಣವೇ ಸಾವು, ಸುಖ-ದುಃಖಗಳು, ನೋವು-ನಲಿವುಗಳು, ಹಿತ-ಆಹಿತ ಘಟನೆಗಳು, ರೋಗ ರುಜಿನ ಅಪಘಾತಗಳು, ಸನ್ಮಾನ-ಅವಮಾನಗಳು ಲಾಭ-ನಷ್ಟ, ಸೋಲು-ಗೆಲುವುಗಳ ದೃಶ್ಯಗಳು ಕಾಣಿಸಿಕೊಳ್ಳುತ್ತಲೇ ಇರುತ್ತವೆ. ಅನೇಕ ಸವಾಲು ಸಮಸ್ಯೆಗಳು, ಅಡ್ಡಿ ಅಡಚಣೆಗಳು ನಮ್ಮನ್ನು ಎದುರುಗೊಳ್ಳುತ್ತವೆ. ಮನಸ್ಸು ವಾಸ್ತವಿಕತೆ ಕಲ್ಪನೆಗಳ ನಡುವೆ ಉಯ್ಯಾಲೆ ಆಡುತ್ತಿರುತ್ತದೆ.ಸತ್ಯ-ಸುಳ್ಳುಗಳ ನಡುವಿನ ವ್ಯತ್ಯಾಸ ತಿಳಿಯುವುದಿಲ್ಲ, ತಾತ್ಕಾಲಿಕ ಲಾಭ ಅನುಕೂಲಕ್ಕೆ ಆದ್ಯತೆ ನೀಡಬೇಕೇ. ದೀರ್ಘಕಾಲದ ಲಾಭ ಅನುಕೂಲತೆಗೆ ಆದ್ಯತೆ ನೀಡಬೇಕೇ ತಿಳಿಯುವುದಿಲ್ಲ. ಸಕಾರಾತ್ಮಕ ಘಟನೆಗಳಾದಾಗ, ನಕಾರಾತ್ಮಕ ಘಟನೆಗಳಾದಾಗ, ಅವಕ್ಕೆ ಯಾರು ಕಾರಣ ಎಂದು ತಿಳಿಯುವುದಿಲ್ಲ. ಧನಬಲ, ಜನಬಲ ಇದ್ದರೆ ಯಾವುದೇ ಘಟನೆಯನ್ನು ಕಷ್ಟವಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ಧನಬಲವು ಕಡಿಮೆ, ಜನಬಲವೂ ಕಡಿಮೆಯೇ, ಆಗ ಏನು ಮಾಡಬೇಕು, ಅಸಹಾಯಕತೆಯ ಅನುಭವವಾದಾಗ ಯಾರನ್ನು ಆಶ್ರಯಿಸಬೇಕು, ಗೊಂದಲ ಮೂಡಿದರೆ ಯಾರನ್ನು ದಾರಿ ತೋರಲು ಕೇಳಬೇಕು, ದೇವರನ್ನೇ, ಹಿರಿಯರನ್ನೇ, ಬಂಧು-ಮಿತ್ರರನ್ನೇ? ಗೊತ್ತಾಗುವುದಿಲ್ಲ.
ಈ ಪುಸ್ತಕದಲ್ಲಿ ಪದ್ಯಗಳ ರೂಪದಲ್ಲಿ ಜೀವನ ಸತ್ಯವನ್ನು ಜೀವನ ಪಾಠವನ್ನು ಹೇಳಲಾಗಿದೆ. ಓದಿ ನಿಮ್ಮ ವಿವೇಕ ವಿವೇಚನೆ ನಿರ್ವಹಣಾ ಶಕ್ತಿಯನ್ನು ಹೆಚ್ಚಿಸಿಕೊಳ್ಳಿ.
Weight
200 GMS
Length
22 CMS
Width
14 CMS
Height
2 CMS
Author
Dr C R Chandrashekar
Publisher
Sapna Book House Pvt Ltd
Publication Year
2022
ISBN-13
9789354561955
Binding
Soft Bound
Language
Kannada