Quantity
Product Description
ಲೇಖಕ ಅರ್ಜುನ್ ದೇವಾಲದಕೆರೆ ಮೂಲತಃ ಸಕಲೇಶಪುರದ ದೇವಾಲದಕೆರೆ ಗ್ರಾಮದವರು, ಮಲೆನಾಡಿನಲ್ಲಿ ಮನೆ ಮಾತಾಗಿರುವ ಅಂಕಣ ಬರಹಗಾರರು, ಕಾದಂಬರಿಕಾರರು ಮತ್ತು ಭಾಷಣಕಾರರು. ಚಿಕ್ಕಮಗಳೂರಿನ ಜಿಲ್ಲಾ ಪತ್ರಿಕೆ ದರ್ಪಣದ ಖಾಯಂ ಅಂಕಣಕಾರರು. ರಾಜ್ಯದ ಮೂಲೆ ಮೂಲೆಗೆ ರಾಷ್ಟ್ರೀಯತೆಯನ್ನು ಪಸರಿಸುತ್ತ, ದೇಶದ ಬಗ್ಗೆ ಸೈನಿಕರ ಬಗ್ಗೆ ಜನಗಳಲ್ಲಿ ಅರಿವು ಮೂಡಿಸುತ್ತಿರುವ ಇವರು ವೃತ್ತಿಯಲ್ಲಿ ಸಾಫ್ಟ್ವೇರ್ ಉದ್ಯೋಗಿ. ಸಾಹಿತಿ ಎಂದರೆ ನಯವಾಗಿ ತಿರಸ್ಕರಿಸಿ ನಾನೊಬ್ಬ ಜನಸಾಮಾನ್ಯನ ಬರಹಗಾರ ಎಂದು ನಸುನಗುವ ಇವರ ಮೊದಲನೇ ಕಾದಂಬರಿ 'ಅವಳು' ರಾಜ್ಯದ ಯುವಜನರ ಮನಸ್ಸುಗೆದ್ದು ಈಗ ನಾಲ್ಕನೇ ಮುದ್ರಣ ಕಾಣುತ್ತಿದೆ. ಲೇಖಕರ ಎರಡನೇ ಕಾದಂಬರಿ "ಆಟಗಾರ" ಕೂಡ ಬಿಡುಗಡೆಯಾಗಿ ಯಶಸ್ವಿಯಾಗಿ ಓದುಗರ ಮನಸ್ಸು ಸೆಳೆಯುದಿದೆ. ಅವರ ಮೂರನೇ ಕಾದಂಬರಿ ಬಿಡುಗಡೆಗೆ ಸಿದ್ಧವಾಗುತ್ತಿದೆ. ಸಧ್ಯಕ್ಕೆ ಯುವ ಬರಹಗಾರರ ಬೆನ್ನಿಗೆ ನಿಂತು ಅವರ ಬರಹಗಳನ್ನು ತಿದ್ದಿ, ಕನ್ನಡ ಸಾಹಿತ್ಯ ಲೋಕಕ್ಕೆ ಹೊಸ ಯುವ ಬರಹಗಾರರನ್ನು ಪರಿಚಯಿಸುವ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ.
Author
Arjun Devaladakere
Binding
Soft Bound
Number of Pages
750
Publication Year
2022
Publisher
Devaaladakere prakashana
Height
10 CMS
Length
10 CMS
Weight
200 GMS
Width
1 CMS
Language
Kannada